ಎಂಡಿಎಚ್ ಮಸಾಲೆ ಸಂಸ್ಥೆಯ ಮಾಲೀಕ, ‘ಪದ್ಮಭೂಷಣ’ ಧರ್ಮಪಾಲ ಗುಲಾಟಿ ನಿಧನ

0
166
Tap to know MORE!

ನವದೆಹಲಿ: ಮಸಾಲಾ ಪುಡಿಗಳ ಉತ್ಪಾದನಾ ಸಂಸ್ಥೆ ಎಂಡಿಎಚ್​ನ ಮಾಲೀಕ ಧರ್ಮಪಾಲ ಗುಲಾಟಿ ಇಂದು ಮುಂಜಾನೆ 5.30ರ ವೇಳೆಗೆ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಕಳೆದ ಮೂರುವಾರಗಳಿಂದ ಅವರು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಇಂದು ಬೆಳಗ್ಗೆ ಅವರಿಗೆ ಹೃದಯ ಸ್ತಂಭನವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಸಿಯಾಲ್ ಕೋಟ್​ನಲ್ಲಿ 1923ರಲ್ಲಿ ಜನಿಸಿದ ಧರ್ಮಪಾಲ ಗುಲಾಟಿ ಅವರು ಆಪ್ತವಲಯದಲ್ಲಿ ದಾಲಾಜಿ, ಮಹಾಶಯಾಜಿ ಎಂದೇ ಕರೆಯಿಸಿಕೊಳ್ಳುತ್ತಿದ್ದವರು. ಬಾಲ್ಯದಲ್ಲೇ ಶಾಲೆ ಬಿಟ್ಟ ಅವರು ತಂದೆ ಆರಂಭಿಸಿದ ಮಸಾಲಾ ವ್ಯಾಪಾರಕ್ಕೆ ಜತೆಗೂಡಿದ್ದರು. ದೇಶದಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಅವರು ಭಾರತಕ್ಕೆ ಆಗಮಿಸಿ ಅಮೃತಸರದಲ್ಲಿ ನಿರಾಶ್ರಿತರ ಶಿಬಿರದಲ್ಲಿ ಉಳಿದುಕೊಂಡಿದ್ದರು.

ಇದನ್ನೂ ಓದಿ: ಮುಂದಿನ ವರ್ಷದಿಂದ ಪ್ರತಿ ಗ್ರಾಮ ಪಂಚಾಯಿತಿಗೂ 1.5 ಕೋಟಿ ನೀಡಲು ಯೋಜನೆ : ನಳಿನ್ ಕುಮಾರ್

ನಂತರ ದೆಹಲಿಗೆ ಆಗಮಿಸಿ ಕರೋಲ್ ಬಾಗ್​ನಲ್ಲಿ ಅಂಗಡಿಯೊಂದನ್ನು ತೆರೆದರು. ಅಧಿಕೃತವಾಗಿ ಕಂಪನಿಯನ್ನು ಆರಂಭಿಸಿದ್ದು 1959ರಲ್ಲಿ. ಮಸಾಲಾ ವ್ಯಾಪಾರವನ್ನು ಉದ್ಯಮ ಸ್ವರೂಪಕ್ಕೆ ತಂದ ಅವರು, ಎಂಡಿಎಚ್ ಮಸಾಲಾವನ್ನು ಜಗತ್ತಿಗೇ ಪರಿಚಯಿಸಿದರು. ಕಳೆದ ವರ್ಷ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಎಂಡಿಎಚ್​ ಮಸಾಲಾ ಕಂಪನಿ ಹೇಳುವ ಪ್ರಕಾರ, ಗುಲಾಟಿ ತಮ್ಮ ವೇತನದ ಶೇಕಡ 90 ಪಾಲನ್ನು ದೇಣಿಗೆ ನೀಡಿದ್ದಾರೆ. (ಏಜೆನ್ಸೀಸ್)

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here