ಮದುವೆ ಆಗುವ ಉದ್ದೇಶದಿಂದ ಆಗುವ ಧಾರ್ಮಿಕ ಮತಾಂತರ ಕಾನೂನುಬಾಹಿರ : ಅಲಹಾಬಾದ್ ಹೈಕೋರ್ಟ್

0
73

ಲಕ್ನೋ: ಕೇವಲ ವಿವಾಹದ ಉದ್ದೇಶದಿಂದ ನಡೆಯುವ ಧಾರ್ಮಿಕ ಮತಾಂತರ ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ವಿವಾಹವಾದ ಮೂರು ತಿಂಗಳ ಬಳಿಕ ತಮಗೆ ರಕ್ಷಣೆ ಕೋರಿ ದಂಪತಿಯೊಂದು ಸಲ್ಲಿಸಿದ್ದ ಅರ್ಜಿ ಕುರಿತಂತೆ ಹಸ್ತಕ್ಷೇಪ ನಡೆಸಲು ನಿರಾಕರಿಸಿದ ಹೈಕೋರ್ಟ್, ತನ್ನ ಈ ಹಿಂದಿನ ಆದೇಶವೊಂದನ್ನೂ ಉಲ್ಲೇಖಿಸಿದೆ.

ಅರ್ಜಿ ಸಲ್ಲಿಸಿದ್ದ ಮಹಿಳೆ ಮೂಲತಃ ಮುಸ್ಲಿಂ ಆಗಿದ್ದರೂ, ಹಿಂದೂ ಯುವಕನೊಂದಿಗೆ ವಿವಾಹ ನಡೆಯುವುದಕ್ಕಿಂತ ಒಂದು ತಿಂಗಳು ಮುಂಚೆ, ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಳು.

ಇದನ್ನೂ ನೋಡಿ : ಜನಾಕ್ರೋಶಕ್ಕೆ ಮಣಿದ ಚಿತ್ರತಂಡ – “ಲಕ್ಷ್ಮೀ ಬಾಂಬ್” ಚಿತ್ರದ ಶೀರ್ಷಿಕೆ ಬದಲು!

ಬಲವಂತದ ಕ್ರಮಗಳ ಮೂಲಕ ಸಂಬಂಧಿಕರು, ತಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ನಡೆಸಬಾರದೆಂದು ಕೋರ್ಟ್ ಆದೇಶಿಸಬೇಕೆಂದು ಕೋರಿ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯದ ಜಸ್ಟಿಸ್ ಮಹೇಶ್ ಚಂದ್ರ ತ್ರಿಪಾಠಿ ಅವರ ನೇತೃತ್ವದ ಏಕಸದಸ್ಯ ಪೀಠ ತನ್ನ ಆದೇಶದಲ್ಲಿ ತಿರಸ್ಕರಿಸಿತ್ತು.

“ಮೊದಲು ಅರ್ಜಿದಾರೆ ಜೂನ್ 26ರಂದು ಮತಾಂತರಗೊಂಡು, ನಂತರ ಒಂದು ತಿಂಗಳ ಬಳಿಕ ಜುಲೈ 31ರಂದು ಆಕೆ ವಿವಾಹವಾಗಿರುವುದರಿಂದ, ವಿವಾಹದ ಏಕೈಕ ಉದ್ದೇಶದಿಂದ ಮತಾಂತರ ನಡೆದಿದೆ’ ಎಂದು ಆದೇಶದಲ್ಲಿ ಹೇಳಿದೆಯಲ್ಲದೆ, ನ್ಯಾಯಾಲಯವು 2014ರಲ್ಲಿ ಬೇರೊಂದು ಪ್ರಕರಣ ಸಂಬಂಧ ನೀಡಿದ ತೀರ್ಪಿನಲ್ಲೂ “ಕೇವಲ ವಿವಾಹದ ಉದ್ದೇಶದಿಂದ ಮತಾಂತರ ಸ್ವೀಕಾರಾರ್ಹವಲ್ಲ” ಎಂದು ಹೇಳಿರುವುದನ್ನು ಉಲ್ಲೇಖಿಸಿದೆ.

LEAVE A REPLY

Please enter your comment!
Please enter your name here