ಸಿಎಸ್‌ಕೆ ಸೋಲಿನ ಹಿನ್ನೆಲೆ – ಎಂ.ಎಸ್.ಧೋನಿ ಪುತ್ರಿಗೆ ಅತ್ಯಾಚಾರದ ಬೆದರಿಕೆ!

0
173
Tap to know MORE!

ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಭಾರತದ ಅತ್ಯುತ್ತಮ ಕ್ರಿಕೆಟರ್​ಗಳ ಪೈಕಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿಯವರ ಕೆಲವು ಅಭಿಮಾನಿಗಳೇ ಅವರ 6 ವರ್ಷದ ಮಗಳಿಗೆ ಅತ್ಯಾಚಾರದ ಬೆದರಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುತ್ತಿದ್ದಾರೆ.

ಧೋನಿ ಕ್ರಿಕೆಟ್​​ನಲ್ಲಿ ಸರಿಯಾಗಿ ಆಡದೇ ಮ್ಯಾಚ್ ಸೋಲಲು ಕಾರಣವಾದ್ರು ಅನ್ನೋ ಸಣ್ಣದೊಂದು ಕಾರಣಕ್ಕೆ, ಏನೂ ಅರಿಯದ ಆರು ವರ್ಷದ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಧೋನಿ ಪುತ್ರಿಗೆ ತನ್ನ ತಂದೆ ಒಬ್ಬ ಸೆಲಿಬ್ರಿಟಿ, ಅತ್ಯುತ್ತಮ ಕ್ರಿಕೆಟ್ ಪ್ಲೇಯರ್.. ಅವರನ್ನು ಜಗತ್ತೇ ಮೆಚ್ಚಿಕೊಂಡಿದೆ ಎನ್ನುವ ಅರಿವೂ ಇಲ್ಲವೇನೋ. ಇಂಥ ಪುಟ್ಟ ಹುಡುಗಿಯನ್ನ ಅತ್ಯಾಚಾರ ಮಾಡುತ್ತೇವೆಂದು ಬೆದರಿಕೆಯೊಡ್ಡುವ ಪಾಪಿಗಳು ನಮ್ಮ ಸಮಾಜದಲ್ಲಿ ಇದ್ದಾರೆನ್ನುವ ವಾಸ್ತವ ಸತ್ಯವೇ ಭಯಬೀಳಿಸುವಂಥದ್ದು. ಧೋನಿ ಕ್ರಿಕೆಟ್​ನಲ್ಲಿ ಆಡದಿರುವುದಕ್ಕೆ ಸಾವಿರ ಕಾರಣಗಳಿರುತ್ತವೆ. ಒಂದು ಪಂದ್ಯ ಸೋಲಬೇಕು ಅಥವಾ ಗೆಲ್ಲಬೇಕು.. ಇದರ ಹೊರತು ಬೇರೇನೂ ಮಾರ್ಗಗಳೇ ಇಲ್ಲ.

ಯಾವುದೇ ಕರುಣೆಯನ್ನೂ ತೋರದೆ ಇಂಥವರ ವಿರುದ್ಧ ಅತ್ಯಂತ ಕಠಿಣ ಶಿಕ್ಷೆಯನ್ನು ತ್ವರಿತವಾಗಿ ಕಾನೂನು ನೀಡಬೇಕು. ಅತ್ಯಾಚಾರ ಅನ್ನೋದು ಸಹಜ ಎಂಬಂತೆ ಭಾವಿಸುವ ಇಂಥಹವರಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಸರ್ಕಾರಗಳು ತ್ವರಿತ ಗಮನ ನೀಡಬೇಕು ಅನ್ನೋದು ನಾಡಿನ ಪ್ರಜ್ಞಾವಂತರ ಒತ್ತಾಯ.

LEAVE A REPLY

Please enter your comment!
Please enter your name here