‘ಹಾಕಿ ಮಾಂತ್ರಿಕ’ ಧ್ಯಾನ್‌ಚಂದ್ ನೆನಪಿನಲ್ಲಿ “ರಾಷ್ಟ್ರೀಯ ಕ್ರೀಡಾ ದಿನ”

0
226
Tap to know MORE!

ಹಾಕಿ ದಂತಕಥೆ ಧ್ಯಾನ್ ಚಂದ್ ಸಿಂಗ್ ಅವರ ಜನ್ಮ ದಿನಾಚರಣೆಯ ನೆನಪಿನಲ್ಲಿ, ಪ್ರತಿ ವರ್ಷ, ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಕ್ರೀಡೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ಧ್ಯಾನ್ ಚಂದ್ ಯಾರು?
‘ಹಾಕಿ ಮಾಂತ್ರಿಕ’ ಎಂದು ಕರೆಯಲ್ಪಡುವ ಧ್ಯಾನ್‌ಚಂದ್ ಸಿಂಗ್ ಅವರು ಆಗಸ್ಟ್ 29, 1905 ರಂದು ಜನಿಸಿದರು. ಅವರು ಬ್ರಿಟಿಷ್ ಭಾರತೀಯ ಸೇನೆಯ ರೆಜಿಮೆಂಟಲ್ ತಂಡದೊಂದಿಗೆ ಹಾಕಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಕ್ರೀಡೆಯಲ್ಲಿ ಅವರ ತ್ಯಾಗ ಮತ್ತು ಸಮರ್ಪಣೆಯಿಂದಾಗಿ ಅವರು ಧ್ಯಾನ್ ಚಂದ್ ಎಂಬ ಹೆಸರನ್ನು ಪಡೆದರು. 1928, 1932 ಮತ್ತು 1936 ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡವು, ಸತತವಾಗಿ ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಇವರ ಕೊಡುಗೆ ಅಸಾಮಾನ್ಯ.

ಅವರು ಸೇನೆಯಲ್ಲಿ ಇದ್ದಾಗ, ಕರ್ತವ್ಯ ಸಮಯದ ಬಳಿಕ ರಾತ್ರಿ ವೇಳೆ ಹಾಕಿ ಅಭ್ಯಾಸ ಮಾಡುತ್ತಿದ್ದರು. ಅದಕ್ಕಾಗಿಯೇ ಜನರು ಅವರನ್ನು ಚಂದ್ ಎಂದು ಕರೆಯಲು ಪ್ರಾರಂಭಿಸಿದರು. ಇದು ಚಂದ್ರನ ಹಿಂದಿ ಪದವಾಗಿದೆ.

ಅವರು 1926 ರಿಂದ 1948 ರವರೆಗೆ ಭಾರತದ ರಾಷ್ಟ್ರೀಯ ತಂಡದಲ್ಲಿದ್ದರು ಮತ್ತು ಈ ವರ್ಷಗಳಲ್ಲಿ, ಧ್ಯಾನ್ ಚಂದ್ 185 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು 400 ಕ್ಕೂ ಹೆಚ್ಚು ಗೋಲುಗಳನ್ನು ಹೊಡೆದಿದ್ದಾರೆ.

1956 ರಲ್ಲಿ, ಭಾರತ ಸರ್ಕಾರವು ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಿದೆ. ಡಿಸೆಂಬರ್ 3, 1979 ರಂದು ಧ್ಯಾನ್ ಚಂದ್ ನಿಧನರಾದರು.

LEAVE A REPLY

Please enter your comment!
Please enter your name here