ಧ್ಯಾನ-ಯಾನ

0
150
Tap to know MORE!

ನಮ್ಮ ಪುರಾಣದಲ್ಲಿ ಅಷ್ಟಯೋಗಗಳ ಉಲ್ಲೇಖವಿದೆ. ಅವುಗಳೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,ಧಾರಣೆ,ಧ್ಯಾನ, ಸಮಾಧಿ.ಇವುಗಳಲ್ಲಿ ಸರಳವಾಗಿ ಮಾಡಬಹುದಾದ ಯೋಗಗಳಲ್ಲಿ ಧ್ಯಾನವು ಒಂದು.
“ಧ್ಯಾನ”- ಹೆಸರೇ ಸೂಚಿಸುವಂತೆ, ಧ್ಧಿ+ ಯಾನ ಈ ಎರಡು ಅಕ್ಷರಗಳಿಂದ ಕೂಡಿದೆ. ಸಂಸ್ಕೃತದಲ್ಲಿ “ಧ್ಧಿ” ಎಂದರೆ ಬುದ್ಧಿ, “ಯಾನ” ಎಂದರೆ ಪಯಣ. ಬುದ್ಧಿಯ ಮೂಲಕ ಮನಸಿನ ಪಯಣ, ಕತ್ತಲೆಯಿಂದ ಬೆಳಕಿನೆಡೆಗೆ ಪಯಣ ,ಹಾಗೆಯೇ ಶರೀರದಿಂದ- ಶಾರೀರ(ಆತ್ಮ)ದೆಡಗೆ ಪಯಣಿಸುವುದೇ ಈ “ಧ್ಯಾನ”.
ಹಿಂದೆ ಋಷಿ ಮುನಿಗಳು ಕಣ್ಣುಮುಚ್ಚಿ ಮಂತ್ರದ ಮೂಲಕ ಯಾ ಶ್ಲೋಕದ ಮೂಲಕ ಧ್ಯಾನ ಮಾಡ್ತಾರೆ ಎನ್ನುವ ಪ್ರತೀತಿ ‌ಇತ್ತು.ಹಾಗೆ ಧ್ಯಾನ ಮಾಡುತ್ತಾ ಆಳವಾಗಿ ತಲುಪುವುದೇ, ಅದರ ಅಂತಿಮ ಘಟ್ಟವೇ “ಸಮಾಧಿ” ಸ್ಥಿತಿ ಎನ್ನುತ್ತೇವೆ. ಸಮಾಧಿ ಸ್ಥಿತಿ ‌ಎಂದರೆ “ಶೂನ್ಯ” ಅಥವಾ “ಸೊನ್ನೆ”. ನೀವೇ ಗಮನಿಸಿರಬಹುದು ಶಿವಲಿಂಗವನ್ನು ಶೂನ್ಯದ ಸಂಕೇತವಾಗಿ ತೋರಿಸಿದ್ದಾರೆ. ಇದರರ್ಥ ಯಾವುದು ಹುಟ್ಟಿಲ್ಲವೋ, ಅದಕ್ಕೆ ನಾಶವಿಲ್ಲ.ಏನೂ ಇಲ್ಲದೇ‌, ಎಲ್ಲವೂ ಇದೆ ಎನ್ನುವ ಪರಿಕಲ್ಪನೆಯೇ ಈ “ಸಮಾಧಿ ಸ್ಥಿತಿ”. ಕೇವಲ ಧ್ಯಾನ ಮಾತ್ರವಲ್ಲದೇ ಉಳಿದ ಅಷ್ಟಾಂಗದ ಮೂಲಕ ಇದನ್ನು ಸಾಧಿಸಬಹುದು.


ಇನ್ನೂ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಬೆಳಕಿನ ವೇಗಕ್ಕೆ ಲೆಕ್ಕಾಚಾರವಿದೆ. ಆದರೆ ಮನಸಿನ ವೇಗಕ್ಕೆ ಯಾವ ಲಂಗು ಲಗಾಮು ಇಲ್ಲ. ಉದಾಹರಣೆಗೆ ನೀವೇ ಕಣ್ಣು ಮುಚ್ಚಿ ಧ್ಯಾನ ಮಾಡಿ – ನಿಮ್ಮ ಮನೆಯೊಳಗೆ ಹೋದ ಹಾಗೆ , ಅಡುಗೆ ಕೋಣೆ ಪ್ರವೇಶಿಸಿ ,ಅಲ್ಲೇ ಒಲೆಯ ಪಕ್ಕದಲ್ಲಿದ್ದ ,ಹುಣಸೆ ಹುಳಿಯನ್ನು ಸವಿದ ಹಾಗೆ,ಈಗ ನಿಮಗೆ ಅರಿವಿಲ್ಲದೇ ಬಾಯಲ್ಲಿ ನೀರೂರಿಸುತ್ತಿದೇ ಅಲ್ಲವೇ?? ಇದಕ್ಕೆ ಕಾರಣವೇನೆಂದರೆ ನಾವು ಕಲ್ಪನೆ ಮಾಡುವುದರಿಂದ ನಮ್ಮ ಮೆದುಳಿನ ಸ್ಥಿತಿ ಬದಲಾಗುತ್ತದೆ.
ಹಾಗೆ ಆರೋಗ್ಯದ ದೃಷ್ಟಿಯಿಂದ ನೋಡಿದರೆ ದಿನವೂ ಧ್ಯಾನ ಮಾಡುವುದರಿಂದ ಮೆದುಳಿನಲ್ಲಿ “ಸೆರಟೋನಿನ್(serotonin)” ಹಾಗೂ “ಡೊಪಾಮಿನ್(dopamine)” ಎನ್ನುವ ಹಾರ್ಮೋನ್ ಗಳು ಬಿಡುಗಡೆಯಾಗುತ್ತದೆ. ನಮ್ಮ ಮನಸ್ಸಿಗೆ ಖುಷಿಯಾದಾಗ, ಉಲ್ಲಾಸದಲ್ಲಿದ್ದಾಗ ಮೆದುಳಿನಲ್ಲಿ ಉತ್ಪತ್ತಿಯಾಗುವುದೇ ಈ ಹಾರ್ಮೋನ್ ಗಳು.
ಇಷ್ಟೆಲ್ಲಾ ಕಾರಣವಿರುವ ಈ ಧ್ಯಾನವನ್ನು, ಮನಸ್ಸಿನ ಎಲ್ಲಾ ಒತ್ತಡಗಳು, ಜಂಜಾಟಗಳನ್ನು ಬದಿಗಿಟ್ಟು, ಅರೆ ಘಳಿಗೆ ಮಾಡಿದರೆ ಮನಸ್ಸು ಎಷ್ಟು ಆಹ್ಲಾದಕರವಲ್ಲವೇ??.

ಜಯಪದ್ಮಿನಿ, ಕುಂದಾಪುರ

LEAVE A REPLY

Please enter your comment!
Please enter your name here