ನಂಬಿಕೆ ಉಳಿಸಿ ಬೆಳೆಸುವ ನಾಯಕ

0
132
Tap to know MORE!

ಭಾರತವು ಹಲವಾರು ಸಂಸ್ಕೃತಿ,ಆಚಾರ-ವಿಚಾರ ,ಕಲೆ ಭಾಷೆಗಳ ಸಂಗಮಭೂಮಿ.ಇಲ್ಲಿ ವಿವಿಧ ಧರ್ಮಗಳು ತನ್ನದೇ ಆದಂತಹ ಮೌಲ್ಯಗಳನ್ನು ಒಳಗೊಂಡು ತಮ್ಮ ಅಸ್ತಿತ್ವವನ್ನು ಭದ್ರವಾಗಿಸಿದೆ.

ಸಹೋದರತೆ,ಮಾನವೀಯತೆ,ಸ್ನೇಹ,ಪರೋಪಕಾರ, ತ್ಯಾಗ ಮುಂತಾದ ಗುಣಗಳಿಗೆ ಇನ್ನೊಂದು ಹೆಸರೇ ಭಾರತ.ಇದು ಪ್ರಜಾಪ್ರಭುತ್ವ ರಾಷ್ಟ್ರವೆಂದರೆ ತಪ್ಪಾಗಲಾರದು. ಪ್ರಜೆಗಳಿಗೆ ತಮ್ಮ ನಾಯಕನನ್ನು ಆಯ್ಕೆಮಾಡುವ ಮುಕ್ತವಾದ ಅವಕಾಶವಿದೆ.ಜನರ ಹಿತ,ಕಷ್ಟ-ಸುಖ,ನಂಬಿಕೆಯನ್ನು ಉಳಿಸುವ ಮತ್ತು ಬೆಳೆಸುವವ ನಿಜವಾದ ನಾಯಕನಾಗುತ್ತಾನೆ.

ನಾನು ಭಾರತದ ಪ್ರಧಾನ ಮಂತ್ರಿಯಾದರೆ; ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ/ಅಂಬೇಡ್ಕರ್, ಭಾರತದ ಪ್ರಖ್ಯಾತ ವಿಜ್ಞಾನಿ,ನಾಯಕ ಡಾ/ಎ. ಪಿ.ಜೆ ಅಬ್ದುಲ್ ಕಲಾಂ ಇತ್ಯಾದಿ ವ್ಯಕ್ತಿಗಳ ಸರಳ-ಸಜ್ಜನಿಕೆಯ ವ್ಯಕ್ತಿತ್ವ ,ಆದರ್ಶಗಳನ್ನು ಪಾಲಿಸುವುದರೊಂದಿಗೆ, ಇವರು ಪ್ರಜೆಗಳಿಗಾಗಿ ನಿಸ್ವಾರ್ಥವಾಗಿ ದುಡಿದ ದುಡಿಮೆಯನ್ನು ನಾನು ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ. ಲಿಂಗ ಅಸಮಾನತೆ,ಜಾತಿ ಪದ್ಧತಿ, ದೇವದಾಸಿ ಪದ್ಧತಿ,ಮೂಢನಂಬಿಕೆ ಇತ್ಯಾದಿಗಳ ನಿರ್ಮೂಲನೆಗೆ ಸದಾ ಸಿದ್ಧನಿರುತ್ತೇನೆ.

ಎಲ್ಲರಿಗೂ ಸಮಾನವಾದ ಶಿಕ್ಷಣ, ಇನ್ನಿತರ ಸೌಲಭ್ಯ, ಕೃಷಿ, ಆರೋಗ್ಯಯುತವಾದ ಕಾಯಕ,ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರ ಬಗ್ಗೆ ವಿಶೇಷ ಕಾಳಜಿ ಮತ್ತು ಸಂಪೂರ್ಣ ಸಹಕಾರವನ್ನು ನೀಡುತ್ತೇನೆ. ಸರ್ವ ಧರ್ಮದವರನ್ನು ಪ್ರೀತಿಸುತ್ತೇನೆ,ಗೌರವಿಸುತ್ತೇನೆ.ವಾಕ್ ಸ್ವಾತಂತ್ರ್ಯದ ಅವಕಾಶದಲ್ಲಿ ಸಾಮಾನ್ಯ ಜನರ ಕಷ್ಟ-ಕಾರ್ಪಣ್ಯಗಳಿಗೆ ಹೆಗಲು ನೀಡಲು ಪ್ರಯತ್ನಿಸುತ್ತೇನೆ.ತಾಯಿ ಮತ್ತು ತಾಯ್ನಾಡಿಗಾಗಿ ಸೇವೆ ಸಲ್ಲಿಸುವ ಪೊಲೀಸರು,ಅನ್ನದಾತರಾದ ರೈತರು,ವೈದ್ಯರ ಏಳ್ಗೆಗಾಗಿ ಸಂಪೂರ್ಣ ಸಹಾಯ,ಸಹಕಾರ ನೀಡುವಲ್ಲಿ ವಿಶೇಷ ಕಾಳಜಿ,ಮತ್ತು ಸ್ವ-ಉದ್ಯೋಗ ಕಲ್ಪಿಸುವ ಪ್ರಯತ್ನ. ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ಹಲವಾರು ಯೋಜನೆ,ವೇದಿಕೆಗಳ ಅವಕಾಶವನ್ನು ಒದಗಿಸಿಕೊಡುವ ಬಗ್ಗೆ ಗಮನಹರಿಸುವಿಕೆ.ರಾಷ್ಟ್ರ ಮತ್ತು ದೇಶದ್ರೋಹ ಮಾಡುವವರ ಬಗ್ಗೆ, ಅವರಿಗೆ ಸಹಾಯ ಒದಗಿಸುವವರಿಗೆ ಕಠಿಣವಾದ ಶಿಕ್ಷೆ.ಸಾಮಾನ್ಯ ಪ್ರಜೆಗಳಿಗೆ ಅಸನ, ವಸನ, ವಸತಿಯ ಬಗ್ಗೆ ವಿಶೇಷವಾದಂತಹ ಯೋಜನೆಯನ್ನು ಜಾರಿಗೆ ತರುವಂತದ್ದು.

ಒಟ್ಟಿನಲ್ಲಿ ನಾನು ಪ್ರಧಾನ ಮಂತ್ರಿಯಾದರೆ “ಜನ ಸೇವೆಯೇ ಜನಾರ್ಧನ ಸೇವೆ” ಎಂಬ ನಾಣ್ಣುಡಿಯನ್ನು ಚಾಚೂ ತಪ್ಪದೇ ಪಾಲಿಸುತ್ತೇನೆ.ಬರವಣಿಗೆಯ ಅವಕಾಶಕ್ಕಾಗಿ “ಸುದ್ದಿವಾಣಿ”ಗೆ ಧನ್ಯವಾದಗಳು.

ಸುಜಿತ್‌ಕುಮಾರ್,ಉಪ್ಪಳ

LEAVE A REPLY

Please enter your comment!
Please enter your name here