ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಟ್ರೆಂಡಿಗ್ ಸುದ್ದಿಯಾಗುತ್ತಲೇ ಇತ್ತ ಶಾಸಕ ಜಮೀರ್ ಅಹ್ಮದ್ ಖಾನ್ ತಮಗೂ ನಟಿ ಸಂಜನಾಗು ಯಾವುದೇ ರೀತಿಯ ಕನೆಕ್ಷನ್ ಇಲ್ಲವೆಂದು ಹೇಳಿಕೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು,
ನಟಿ ಸಂಜನಾ ಜೊತೆಗೆ ತಾವು ಕೊಲಂಬೋಗೆ ಹೋಗಿಲ್ಲ. ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿಲ್ಲ ಎಂದು ಹೇಳಿದ್ದಾರೆ. ನಟಿ ಸಂಜನಾ ಜೊತೆಗೆ ಕೊಲಂಬೋಗೆ ಹೋಗಿದ್ದು ದೃಢವಾದರೆ ಸರಕಾರಕ್ಕೆ ನನ್ನ ಆಸ್ತಿಯನ್ನು ಬರೆದುಕೊಡುವೆ ಎಂದು ಶಾಸಕ ಜಮೀರ್ ಅಹ್ಮದ್ ಸವಾಲ್ ಹಾಕಿದ್ದಾರೆ.