ಕಡಬ ತಾಲೂಕಿನ ಹೊಸ್ಮಠ ಸೇತುವೆಯ ಬಳಿ ವ್ಯಕ್ತಿಯೋರ್ವ ನದಿಗೆ ಹಾರಿ ಈಜಾಡುತ್ತಾ ಕಾಲ ಕಳೆದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು, ಆತ ನದಿಗೆ ಬಿದ್ದಿದ್ದಾನೆ ಎಂದು ಆತನ ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಆ ವ್ಯಕ್ತಿಯು ಆತನ ಸಹಾಯಕ್ಕೆ ಧಾಮಿಸಿದ ಸ್ಥಳೀಯರನ್ನು ಆತ ನೀರಿಗೆ ಎಳೆದು ಹಾಕಿ ಹುಚ್ಚಾಟ ಮೆರೆದಿದ್ಧಾನೆ.
ತಕ್ಷಣ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ತಳಕ್ಕೆ ಪೊಲೀಸರು ಧಾವಿಸಿ ಪ್ರಶ್ನೀಸುತ್ತಿದ್ದಾಲೇ ಆತ ನದಿಯಲ್ಲೇ ನಿಂತು ಪೊಲೀಸರ ಕಾಲನ್ನು ಎಳೆದಿದ್ಧಾನೆ. ಹರಸಾಹಸ ಪಟ್ಟು ಸ್ಥಳೀಯರ ಸಹಾಯದೊಂದಿಗೆ ಕಡಬ ಠಾಣಾ ಎಸೈ ರುಕ್ಮನಾಯ್ಕ್, ಎ ಎಸೈ ಸುರೇಶ್ , ಸಿಬ್ಬಂದಿಗಳಾದ, ಕನಕ ರಾಜ್ ಹಾಗೂ ಭವಿತ್ ಆತನನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.