ನನ್ನದೊಂದು ಆಶಯ…

0
273
Tap to know MORE!

ಮನುಷ್ಯರ ನಡುವಿನ ದ್ವೇಷವ ಕೆಡವುತ
ಪ್ರೀತಿ ಎಂಬ ಬೀಜವನ್ನು ಬಿತ್ತೋಣ |
ನಾವೆಲ್ಲರೂ ಒಂದೇ ಎಂದು ಸಾರುತ
ಎಲ್ಲರೂ ಸಮಾನರೆಂದು ತಿಳಿಸೋಣ ||

ಜಾತಿ-ಜಾತಿ ಎಂದು ಕಿತ್ತಾಡಿ ಸಾಯುವವರಿಗೆ
ಸತ್ತಾಗ ಸೇರೋದು ಮಣ್ಣೆಂದು ಅರ್ಥೆಸೋಣ |
ಹೆತ್ತು ಹೊತ್ತು ಸಲಹಿ ಸಾಕಿದ ತಂದೆತಾಯಿಯರಿಗೆ
ಪ್ರತಿಕ್ಷಣವು ಶಿರವಬಾಗಿ ನಾವೆಲ್ಲರೂ ನಮಿಸೋಣ ||

FACT CHECK: ತನ್ನ ದೇಶದ ಯುದ್ಧ ವಿಮಾನಕ್ಕೆ ಮೃತ ಸೌಮ್ಯ ಅವರ ಹೆಸರನ್ನು ಇಡಲಿಲ್ಲ ಇಸ್ರೇಲ್!

ನೀರಿಲ್ಲದ ಮರುಭೂಮಿ ಪ್ರದೇಶದಲ್ಲಿಯೂ
ಮರ- ಗಿಡಗಳನ್ನು ಬೆಳೆಸಲು ಪ್ರಯತ್ನಿಸೋಣ |
ಯಾರಿಗೂ ಬೇಡದ ಬರಡಾದಂತ ಭೂಮಿಯಲ್ಲಿಯೂ
ಲಾಭ ತಂದುಕೊಡುವಂತಹ ಬೆಳೆಯನ್ನು ತೆಗೆಯೋಣ ||

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನಿರಾಸೆಯಿಂದ ಬದುಕಿನಲ್ಲಿ ಬೇಸಾತ್ತ ಮನುಜನಿಗೆ
ಕರೆದು ಭರವಸೆಯ ನುಡಿಗಳನ್ನು ನಾವು ಹಾಡೋಣ |
ನಮ್ಮೆಲ್ಲರನ್ನು ಗಡಿಯಲ್ಲಿ ಕಾಯುವ ದೇಶದ ಸೈನಿಕರಿಗೆ
ಎಂದೆಂದಿಗೂ ಅಪಮಾನವನ್ನು‌ ಮಾಡದಿರೋಣ ||

ಅಜ್ಞಾನಿಯಂತೆ ಅಡ್ಡಾಡ್ಡಿ ತಿರುಗುವವರನ್ನು
ಬುದ್ದಿಮಾತ ಹೇಳಿ ಜೀವನದಲ್ಲಿ ಮುನ್ನಡೆಸೋಣ |
ಕಲ್ಲು ಬಂಡೆಯಂತಿರುವ ಮನುಷ್ಯನ ಮನಸ್ಸನ್ನು
ಪ್ರೀತಿ ಎಂಬ ಅಮೃತದಿಂದ ಎಲ್ಲರಂತಾಗಿ ಮಾಡೋಣ ||

ಕಾವ್ಯ ಸಾಮಾನಿ (ಮಲಾರ ಬೀಡು)
ಬಂಟ್ವಾಳ

LEAVE A REPLY

Please enter your comment!
Please enter your name here