ನನ್ನ ಅಳಲು

0
63

ಕಾಡಲ್ಲಿ ಮೇಡಲ್ಲಿ ಹಾಯಾಗಿರುವೆ
ಆದರೀ ಮಾನವರ ಉಪಟಳದಿಂದ ಬೇಸತ್ತಿರುವೆ
ಅವರ ಪಾಪ ಕೃತ್ಯ ನಮಗೆಲ್ಲಾ ಶಾಪ
ದಯೆಯಿಲ್ಲದವರಿಗೆ ದೇವ ನೀನೇ ಕೊಡು ಶಾಪ

ಕಾಡೆಂಬ ನಮ್ಮ ಸುಂದರ ಮನೆಯನ್ನೇ ಕೆಡಹುವರು, ನಮಗಿಲ್ಲಿ ಆಹಾರ ಇಲ್ಲದಂತೆ ಮಾಡಿಹರು
ಅವರಾಸೆಗೆ ನಮ್ಮ ಆಶ್ರಯವೇಕೆ ಕೊಡುವೆ ನೀ
ದೇವನೇ ಆದರೂ ನೀನು ಏತಕೆ ಆಗಿರುವೆ ಮೌನಿ

ಏ ಮಾನವ ನೀ ಹಾಯಾಗಿದ್ದರೆ ಸಾಕೇ
ನನ್ನನ್ನು ನಿನ್ನಂತೆ ಬದುಕಲು ಬಿಡುವುದಿಲ್ಲ ಏಕೆ?
ನಿನ್ನ ಸ್ವಾರ್ಥಕ್ಕೆ ನಲುಗಿದೆ ನಮ್ಮ ಕುಲ
ನಿನ್ನ ಈ ಕೃತ್ಯದಿಂದ ಆಗಲಿದೆ ಕೋಲಾಹಲ

ಗಿರೀಶ್ ಪಿ ಎಂ

LEAVE A REPLY

Please enter your comment!
Please enter your name here