ನನ್ನ ಭಾರತ

0
182
Tap to know MORE!

ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ನಮ್ಮ ಭಾರತ. ಈ ದೇಶವನ್ನು ನಮ್ಮ ಹಿಂದಿನ ತಲೆಮಾರಿನ ಮತ್ತು ಈಗಿನ ಸದೃಢ ನಾಯಕರು ಭಾರತವನ್ನು ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದಾರೆ.ಒಂದು ವೇಳೆ ನಾನು ಭಾರತದ ಪ್ರಧಾನಮಂತ್ರಿ ಪಟ್ಟವನ್ನು ಅಲಂಕರಿಸಿದರೆ ನಮ್ಮ ದೇಶವನ್ನು ಇನ್ನೂ ಹೆಚ್ಚಾಗಿ ಅಭಿವೃದ್ಧಿಪಡಿಸುವೆ. ನಾನು ಆ ಶ್ರೇಷ್ಠ ರಾಜಕಾರಣಿ ನಾಯಕರ ಸಾಲಿನಲ್ಲಿ ನಿಲ್ಲುವುದರಲ್ಲಿ ನನಗೆ ಸಂದೇಹವೇ ಇಲ್ಲ.

ಈ ಪುಣ್ಯ ಭಾರತಾಂಬೆಯ ಸೇವೆಯ ಮಾಡುವ ಭಾಗ್ಯ ಸಿಕ್ಕರೆ ನನ್ನ ಸ್ಥಾನವನ್ನು ದುರುಪಯೋಗ ಮಾಡದೆ ಬದಲಾಗಿ ಸದುಪಯೋಗಿಸುವೆ.

ವಿಜ್ಞಾನ ಮತ್ತು ತಂತ್ರಜ್ಞಾನ:ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳನ್ನು ನಾನು ಇನ್ನೂ ಹೆಚ್ಚಾಗಿ ಅಭಿವೃದ್ಧಿಪಡಿಸುವೆ. ಯಾಕೆಂದರೆ ದೇಶಕ್ಕೆ ವಿಜ್ಞಾನ ತಂತ್ರಜ್ಞಾನವು ಬಹಳ ಅವಶ್ಯಕವಾಗಿದೆ.ನಮ್ಮ ದೇಶದಲ್ಲಿಯೇ ತಂತ್ರಜ್ಞಾನಗಳನ್ನು ತಯಾರಿಸುವಂತಹ ಕೈಗಾರಿಕೆಗಳನ್ನು ಸ್ಥಾಪಿಸುವೆ ಮತ್ತು ಈ ಕೈಗಾರಿಕೆಯಿಂದ ಉದ್ಯೋಗದ ಅವಕಾಶಗಳು ಲಭಿಸುತ್ತದೆ. ವಿದೇಶದಿಂದ ಆಮದು ಮಾಡುವ ಬದಲು ನಮ್ಮ ದೇಶದಲ್ಲಿಯೇ ಅತ್ಯಾಧುನಿಕ ಕೈಗಾರಿಕೆಗಳನ್ನು ಸ್ಥಾಪಿಸುವೆ ಇದರಿಂದಾಗಿ ಆಮದು ಮಾಡುವ ಹೆಚ್ಚಿನ ಅವಶ್ಯಕತೆ ಇರುವುದಿಲ್ಲ. ಭಾರತದಲ್ಲಿ ಡಿಜಿಟಲೀಕರಣಕ್ಕೆ ಪ್ರೋತ್ಸಾಹ ಕೊಡುವೆ.

ಶಾಶ್ವತ ನೀರಾವರಿ ಯೋಜನೆ:
ನಮ್ಮ ದೇಶದಲ್ಲಿ ಸಾಕಷ್ಟು ಬರಪೀಡಿತ ಪ್ರದೇಶಗಳನ್ನು ಕಾಣಬಹುದು. ಅಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಶಾಶ್ವತ ನೀರಾವರಿ ಯೋಜನೆಯನ್ನು ಕೈಗೊಳ್ಳುವುದರಿಂದ ಆ ಪ್ರದೇಶದಲ್ಲಿನ ಜನರಿಗೆ ನೀರಿನ ಬಳಕೆ ಸುಲಭವಾಗುವುದು. ಮಾತ್ರವಲ್ಲದೆ ನೀರಾವರಿ ಯೋಜನೆಯ ಉದ್ದೇಶ ಕೃಷಿಕರಿಗೆ ಉಪಯೋಗವಾಗಬೇಕು ಇದರಿಂದ ಕೃಷಿಯ ಪ್ರಮಾಣ ದೇಶದಲ್ಲಿ ಅಧಿಕವಾಗುತ್ತದೆ. ಕೃಷಿಕರಿಗೆ ನೀರಿನ ಕೊರತೆಯು ಇರದು. ನಮ್ಮ ದೇಶದ ಜನತೆ ದಾಹದಿಂದ ಇರಬಾರದೆಂಬ ಉದ್ದೇಶ ನನಗಿದೆ. ಭಾರತದಲ್ಲಿ ಸಂಪೂರ್ಣ ಜಲಕ್ಷಾಮ ನಿರ್ಮೂಲನೆಯಾಗಬೇಕು ಎಂಬ ಕನಸನ್ನು ನಾನು ನನಸು ಮಾಡುವೆ.

ವಿದೇಶ ಪ್ರವಾಸ: ನನ್ನ ಅಧಿಕಾರದ ಅವಧಿಯಲ್ಲಿ ನಾನು ವಿದೇಶ ಪ್ರವಾಸವನ್ನು ಆಗಾಗ ಕೈಗೊಳ್ಳುವೆ ಇದರಿಂದಾಗಿ ನಮ್ಮ ದೇಶ ಮತ್ತು ವಿದೇಶಗಳ ನಡುವೆ ಸಂಬಂಧ ಉತ್ತಮವಾಗುತ್ತದೆ. ಸರಕು ಮತ್ತು ಸೇವೆಗಳ ವಿನಿಮಯಗಳಿಗೆ ಮತ್ತು ಕೆಲವು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ.

ಶಿಕ್ಷಣ ಮತ್ತು ಕ್ರೀಡೆ:ದೇಶದಲ್ಲಿನ ಎಲ್ಲಾ ಮಕ್ಕಳು ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಲೇಬೇಕು. ದೇಶದಲ್ಲಿ ಕನಿಷ್ಠ ಹತ್ತನೇ ತರಗತಿಯವರೆಗೂ ಎಲ್ಲರೂ ವಿದ್ಯಾಭ್ಯಾಸ ಪೂರೈಸಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ನಾನು ಸೂಕ್ತವಾಗಿ ಕಲ್ಪಿಸುವೆ. ಭಾರತದಲ್ಲಿ ಸಾಕ್ಷರತೆ ದರವನ್ನು ಹೆಚ್ಚಿಸವೆ.
ನಮ್ಮ ಯುವಜನರಿಗೆ ಕ್ರೀಡೆಯ ಮೇಲಿನ ಆಸಕ್ತಿ ಮತ್ತು ಉತ್ತಮ ಕ್ರೀಡಾಪಟು ಆಗಬೇಕೆಂಬ ಛಲವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಕ್ರೀಡಾ ಘಟಕವನ್ನು ಸ್ಥಾಪಿಸುವೆ. ಇದರಿಂದ ಅವರ ಪ್ರತಿಭೆಗಳು ಲೋಕಕ್ಕೆ ಪರಿಚಯವಾಗುತ್ತದೆ.

ರಕ್ಷಣೆ:ದೇಶದ ರಕ್ಷಣೆ ಮತ್ತು ನಮ್ಮ ಪ್ರಜೆಗಳ ರಕ್ಷಣೆಗಾಗಿ ಸೇನೆಗೆ ಅಗತ್ಯವಿರುವ ಹೊಸ ಶಸ್ತ್ರಾಸ್ತ್ರಗಳನ್ನು ಖರೀದಿಸುವೆ. ರಕ್ಷಣಾ ಪಡೆಗಳನ್ನು ಹೆಚ್ಚಿಸುವೆ. ಸೇನೆಗೆ ಅಗತ್ಯವಿರುವ ಹೊಸ ತಂತ್ರಜ್ಞಾನಗಳನ್ನು ಖರೀದಿಸುವೆ.

ಇತರ ಯೋಜನೆ:ವೈದ್ಯಕೀಯ ಕ್ಷೇತ್ರದಲ್ಲಿ ದೇಶವನ್ನು ಸದೃಢ ಮಾಡಲು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಅಗತ್ಯವಿರುವ ಯೋಜನೆಯನ್ನು ರೂಪಿಸುವೆ.ದೇಶದಲ್ಲಿನ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಪ್ರೋತ್ಸಾಹ ನೀಡುವಂತಹ ಯೋಜನೆಗಳನ್ನು ರೂಪಿಸಿ ಅದನ್ನು ಅನುಷ್ಠಾನಕ್ಕೆ ತರುವೆ.
ಜಿಡಿಪಿಯ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಡುವೆ. ಸಭೆಗಳನ್ನು ಕರೆದು ಹೊಸ ಹೊಸ ಜನೋಪಯೋಗಿ ನಿರ್ಧಾರಗಳನ್ನು ಕೈಗೊಳ್ಳಲು ಪಕ್ಷದ ನಾಯಕರ ಅಭಿಪ್ರಾಯ ಕೇಳುವೆ. ಅವರ ನಿರ್ಧಾರದ ಮೇರೆಗೆ ಹೊಸ ಕಾನೂನು ಅಥವಾ ನೀತಿಯನ್ನು ಜಾರಿಗೊಳಿಸುವೆ. ಇನ್ನೂ ಹೆಚ್ಚಿನ ಯೋಜನೆಯನ್ನು ನಾನು ರೂಪಿಸಿ ಅದನ್ನು ಅನುಷ್ಠಾನಕ್ಕೆ ತರುವೆ.

ಗಿರೀಶ್ ಪಿ.ಎಂ

LEAVE A REPLY

Please enter your comment!
Please enter your name here