ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಬಸ್ ಸಂಚಾರ ಸ್ಥಗಿತ : ದಿಲ್ ರಾಜ್ ಆಳ್ವ

0
233
Tap to know MORE!

ಮಂಗಳೂರು (ಪಬ್ಲಿಕ್ ನೆಕ್ಸ್ಟ್ ವರದಿ) :

‌ಲಾಕ್ ಡೌನ್‌ ಸಡಿಲಗೊಂಡ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಆರಂಭವಾದ ಸಿಟಿ ಮತ್ತು ಖಾಸಗಿ ಬಸ್‌ ಸಂಚಾರಕ್ಕೆ ಜನಸ್ಪಂದನೆ ಸಿಗುತ್ತಿಲ್ಲ. ಹೀಗಿದ್ದಾಗ, ರಾಜ್ಯ ಸರಕಾರವು ಬಸ್‌ ಮಾಲಕರ ಬೇಡಿಕೆ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಖಾಸಗಿ, ಸಿಟಿ ಬಸ್‌ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಬಸ್‌ ಮಾಲಕರು ಮುಂದಾಗಿದ್ದಾರೆ.

ಒಂದೆಡೆ ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಿದೆ. ಕೋವಿಡ್-19 ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೆಳಗ್ಗೆ, ಸಂಜೆ ಹೊರತುಪಡಿಸಿ ಹೆಚ್ಚಿನ ಬಸ್‌ಗಳು ಖಾಲಿಯಾಗಿ ಸಂಚರಿಸುತ್ತಿವೆ. ಆದಾಯಕ್ಕಿಂತ ಹೆಚ್ಚು ನಷ್ಟ ಉಂಟಾಗುತ್ತಿದೆ.

ನಗರದಲ್ಲಿ ಶೇ.50ರಷ್ಟು ಸಿಟಿ ಬಸ್‌ಗಳು ಸಂಚರಿಸುತ್ತಿವೆ. ಬಹುತೇಕ ಬಸ್‌ಗಳು ನಷ್ಟ ದಲ್ಲೇ ಕಾರ್ಯಾಚರಿಸುತ್ತಿವೆ. ಕೆಲವೊಂದು ರೂಟ್‌ಗಳಲ್ಲಿ ಖರ್ಚಾದಷ್ಟು ಹಣವೂ ಸಿಗುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸದ್ಯ 12 ರೂ. ತೈಲ ಬೆಲೆಯಲ್ಲಿ ಏರಿಕೆಯಾಗಿದೆ.
– ದಿಲ್‌ರಾಜ್‌ ಆಳ್ವ,
ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ

LEAVE A REPLY

Please enter your comment!
Please enter your name here