ಮುಂದಿನ ವರ್ಷದಿಂದ ಪ್ರತಿ ಗ್ರಾಮ ಪಂಚಾಯಿತಿಗೂ 1.5 ಕೋಟಿ ನೀಡಲು ಯೋಜನೆ : ನಳಿನ್ ಕುಮಾರ್

0
160
BENGALURU. OCT 05 (UNI) :- Karnataka State BJP President and MP, Nalin Kumar Kateel addressing a press conference at State BJP office in Bengaluru on Saturday. UNI PHOTO SLP 3U
Tap to know MORE!

ಚಿಕ್ಕಬಳ್ಳಾಪುರ: ಮುಂಬರುವ ಆರ್ಥಿಕ ವರ್ಷದಲ್ಲಿ ಗ್ರಾಮಗಳ ಸಶಕ್ತೀಕರಣಕ್ಕೆ ರಾಜ್ಯ ಸರಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಅದರಂತೆ ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೂ 1.5 ಕೋಟಿ ಹಣ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ. ಅದರ ಜತೆಗೆ ಗ್ರಾಪಂಗಳ ಅಭಿವೃದ್ಧಿಗೆ 31 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ತಿಳಿಸಿದರು.

ನಗರದ ಕೋಲಾರ ರಸ್ತೆಯಲ್ಲಿರುವ ಕೆಎಂಡಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳಲ್ಲಿ ಈ ಹಿಂದೆ ನೀರಿಗಾಗಿ ಜಿಪಂನಿಂದ ಹಣ ಪಡೆದುಕೊಳ್ಳಬೇಕಾಗಿತ್ತು. ಆದರೆ ಇಂದು ಅದನ್ನು ತಪ್ಪಿಸಿ ನೇರವಾಗಿ ಗ್ರಾಪಂಗಳಿಂದಲೇ ಅದಕ್ಕೆ ಹಣ ವ್ಯಯಿಸಲು ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೆ ನರೇಗಾ ಹಣವನ್ನೂ ಸಹ ಗ್ರಾಪಂನಿಂದಲೇ ನೇರವಾಗಿ ಫಲಾನುಭವಿಗಳಿಗೆ ನೀಡಲು ಯೋಜಿಸಲಾಗಿದೆ.

ಇದನ್ನೂ ಓದಿ: ಮುಂದಿನ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ : ಸಚಿವ ಪ್ರಭು ಚೌಹಾಣ್

ಹೀಗೆ ಹಲವು ಕ್ರಾಂತಿಕಾರಕ ಬದಲಾವಣೆಗಳನ್ನು ಇಂದು ರಾಜ್ಯ ಬಿಜೆಪಿ ಸರಕಾರದಿಂದ ಮಾಡಲಾಗಿದೆ. ಆದ್ದರಿಂದ ಮುಂದೆ ನಡೆಯುವ ಗ್ರಾಪಂ ಚುನಾವಣೆಗೆ ಬಿಜೆಪಿ ಕಾರ್ಯಕರ್ತರು ಸುಲಭವಾಗಿ ಸ್ಪರ್ಧೆ ಮಾಡಿ ಗೆಲ್ಲಬಹುದಾಗಿದೆ ಎಂದರು. ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಕಟ್ಟಕಡೆಯ ವ್ಯಕ್ತಿಯನ್ನು ನಿರ್ಲಕ್ಷಿಸದೆ ಇಂದು ಸರಕಾರದ ಯೋಜನೆಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ದೇಶವನ್ನು ಮುಖ್ಯವಾಗಿ ಆರ್ಥಿಕ ಸಬಲತೆಯನ್ನು ಹೊಂದುವಂತೆ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಅವರು ಅಧಿಕಾರಕ್ಕೆ ಬರುವ ಮುನ್ನ ಕೇವಲ 10 ಕೋಟಿ ಬ್ಯಾಂಕು ಖಾತೆಗಳಿದ್ದವು. ಆದರೆ ಇಂದು ಮೋದಿಯವರು ಅಧಿಕಾರಕ್ಕೆ ಬಂದ 6 ವರ್ಷಗಳಲ್ಲಿ ಅದು 35 ಕೋಟಿಗೆ ತಲುಪುವಂತೆ ಮಾಡಿದರು. ಹೀಗೆ ಯೋಜನೆಗಳನ್ನು ಮಾಡಿ ಮರೆಯಲಿಲ್ಲ, ಬದಲಿಗೆ ಆ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಜರಾಯಿ ಮತ್ತು ಮೀನುಗಾರಿಕೆ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜಕಾರಣವೆಂದರೆ ವ್ಯಕ್ತಿ ತಾನು ನಂಬಿರುವ ತತ್ವ ಸಿದ್ಧಾಂತಗಳ ಮೂಲಕ ಜನಕಲ್ಯಾಣ ಮಾಡುವ ಸಲುವಾಗಿ ನಡೆಸುವ ಹೋರಾಟವಾಗಿದೆ. ಸಂವಿಧಾನದ 71ನೇ ವಿಧಿ ತಿದ್ದುಪಡಿ ಮಾಡಿರುವುದರ ಉದ್ದೇಶ ದೇಶದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಯೋಜನೆಗಳು ಸಿಗಬೇಕು ಎಂಬ ಉದ್ದೇಶದಿಂದ.
ಆ ನಿಟ್ಟಿನಲ್ಲಿ ಇಂದು ಬಿಜೆಪಿ ಪಕ್ಷ ಗ್ರಾಮೀಣ ಮಟ್ಟದಲ್ಲಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಆ ಸವಲತ್ತುಗಳನ್ನು ನಿಸ್ವಾರ್ಥವಾಗಿ ಜನರಿಗೆ ತಲುಪಿಸುವ ಸಲುವಾಗಿ ಗ್ರಾಪಂ ಚುನಾವಣೆಯನ್ನು ತುಂಬ ಪರಿಣಾಮಕಾರಿಯಾಗಿ ಸ್ವೀಕರಿಸಿದೆ ಎಂದು ಅಭಿಪ್ರಾಯಪಟ್ಟರು.

ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಬಿಜೆಪಿ ಉಪಾಧ್ಯಕ್ಷ ಶಂಕರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ, ಕೇಶವ್‌ಪ್ರಸಾದ್‌, ರಾಜ್ಯ ಕಾರ್ಯಕಾರಿಣಿ ಸದಸ್ಯ ಸತ್ಯನಾರಾಯಣ ಮಹೇಶ್‌ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here