ಕಾಂಗ್ರೆಸ್‌ ಪಕ್ಷದ ಕಪಟ ನಾಟಕ ಜನರಿಗೆ ಅರಿವಾಗಿದೆ : ನಳಿನ್ ಕುಮಾರ್

0
184
BENGALURU. OCT 05 (UNI) :- Karnataka State BJP President and MP, Nalin Kumar Kateel addressing a press conference at State BJP office in Bengaluru on Saturday. UNI PHOTO SLP 3U
Tap to know MORE!

“ದೇಶದಲ್ಲಿ ಪರಿವರ್ತನೆಯ ಗಾಳಿಯನ್ನು ಕಾಣಬಹುದು. ಎಲ್ಲೆಡೆ ನಿರೀಕ್ಷೆ ಮೀರಿ ಬಿಜೆಪಿಗೆ ಜಯ ಲಭಿಸಿದೆ. ವಿಪಕ್ಷಗಳ ಆರೋಪಗಳೆಲ್ಲಾ ಸುಳ್ಳು ಎಂದು ಸಾಬೀತಾಗಿದೆ. ಕಾಂಗ್ರೆಸ್‍ನ ಕಪಟ ನಾಟಕ ಅಂತಾ ಜನರಿಗೆ ಗೊತ್ತಾಗಿದೆ” ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲೂ ನಾಲ್ಕರಲ್ಲಿ ನಾಲ್ಕೂ ಸ್ಥಾನ ಗೆದ್ದಿದ್ದೇವೆ. ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಯಡಿಯೂರಪ್ಪವನರಿಗೆ ಸವಾಲುಗಳು ಎದುರಾದವು. ಎಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಾಜ್ಯದ ರಕ್ಷಣೆ ಬಿಎಸ್‍ವೈರಿಂದ ಸಾಧ್ಯ ಎಂಬುದನ್ನು ಜನ ಕಂಡಿದ್ದಾರೆ ಎಂದರು.

ಇದನ್ನೂ ಓದಿ: ಶಬರಿಮಲೆ : ಭಕ್ತರಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ ಸರ್ಕಾರ

ದೇಶದ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಸಾಧನೆಗಳು ಜನರನ್ನು ತಲುಪಿದೆ. ರಾಷ್ಟ್ರದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಕೋವಿಡ್ ನಿರ್ವಹಣೆಯ ಸಫಲತೆ ಚುನಾವಣಾ ಫಲಿತಾಂಶದಲ್ಲಿ ಕಂಡಿದೆ ಎಂದು ಹೇಳಿದರು.

ಎಲ್ಲೆಡೆ ಬಿಜೆಪಿ ಸಾಮೂಹಿಕ ನಾಯಕತ್ವಕ್ಕೆ ಜಯ ಸಿಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಹಾಗೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರಕ್ಕೆ ಜನ ಆಶೀರ್ವಾದ ಮಾಡಿದ್ದಾರೆ.ವಿಪಕ್ಷಗಳು ಟೀಕೆ ಮಾಡಿದರೂ, ಜನರ ಒಲವು ಬಿಜೆಪಿಯತ್ತ ಇದೆ ಎಂದರು.

LEAVE A REPLY

Please enter your comment!
Please enter your name here