“ನವರಾತ್ರಿಯೊಳಗೆ ನಿಯಂತ್ರಣಕ್ಕೆ ಬರಲಿದೆ ಕೊರೋನಾ” – ಕೇಂದ್ರ ಆರೋಗ್ಯ ಸಚಿವ ವಿಶ್ವಾಸ

0
170
Tap to know MORE!

ದೇಶಕ್ಕೆ ಸೋಂಕು ವಕ್ಕರಿಸುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿಯವರು ಸೂಕ್ತ ರೀತಿಯ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದರು. ಇದರ ಪರಿಣಾಮ, ಈ ವರ್ಷದ ನವರಾತ್ರಿ-ದೀಪಾವಳಿ ಹಬ್ಬವು ಬರುವುದರೊಳಗೆ ದೇಶದಲ್ಲಿ ವಕ್ಕರಿಸಿಕೊಂಡಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ, ದೇಶದಲ್ಲಿ ಸದ್ಯ ಪರಿಸ್ಥಿತಿ ಬದಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಫೆಬ್ರವರಿ ತಿಂಗಳಲ್ಲಿ ಪುಣೆಯಲ್ಲಿ ಮಾತ್ರವೇ ಒಂದು ಪ್ರಯೋಗಾಲಯವಿತ್ತು. ಆದರೆ, ಇದೀಗ ಪ್ರಯೋಗಾಲಯಗಳ ಸಂಖ್ಯೆ ಏರಿಕೆಯಾಗಿದ್ದು, 1582ಕ್ಕೆ ಹೆಚ್ಚಾಗಿದೆ. ಇವುಗಳಲ್ಲಿ ಸರಕಾರಿ ಪ್ರಯೋಗಗಳೇ ಅಧಿಕವಾಗಿವೆ. ಇದೀಗ ಪ್ರತಿದಿನ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here