ನಿನ್ನೆ ಮತ್ತು ಇಂದು ಪತ್ರಿಕೆಗಳಲ್ಲಿ ಮತ್ತು ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಲೇಖನವು ಹರಿದಾಡುತ್ತಿತ್ತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನವು ಭಾರತದಲ್ಲಿ ಕೋವಿಡ್-೧೯ ರ ಗರಿಷ್ಠ ಹಂತವು ನವೆಂಬರ್ ಮಧ್ಯಭಾಗದಲ್ಲಿ ಬರಬಹುದೆಂದು ಸೂಚಿಸುತ್ತದೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಇದೀಗ ಐಸಿಎಂಆರ್, ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ, ಅಂತಹ ವರದಿಯನ್ನು ತಾನು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
The news reports attributing this study to ICMR are misleading. This refers to a non peer reviewed modelling, not carried out by ICMR and does not reflect the official position of ICMR. pic.twitter.com/OJQq2uYdlM
— ICMR (@ICMRDELHI) June 15, 2020