ನಶೆಯ ಲೋಕ

0
190
Tap to know MORE!

ನಶೆಯ ಅಮಲಿನಲ್ಲಿ ತೇಲುವ ಮನಸ್ಸುಗಳು
ಮರೆಯುತ್ತಿದ್ದಾರೆ ಮರೆಯುತ್ತಿದ್ದಾರೆ ಕಂಡ ಕನಸುಗಳು
ನಶೆಗೆ ಮಾರಿಕೊಂಡಿದ್ದಾರೆ ಅವರು ತಮ್ಮ ತಮ್ಮ ವಯಸ್ಸು
ಈ ಕೆಟ್ಟ ಚಟಕ್ಕಾಗಿ ಮೀಸಲಿಟ್ಟಿದ್ದಾರೆ ಅವರು ತಮ್ಮ ಆಯಸ್ಸು

ಎತ್ತ ಹೋಗುತ್ತಿದೆ ಯುವ ಮನಸ್ಸುಗಳ ಹಾದಿ
ಹರಿಯುತ್ತಿದೆ ಅವರೊಳಗೆ ಅಮಲು ಕಮಾಲಿನ ನದಿ
ನಮ್ಮ ಬಾಳಲ್ಲಿ ದುಷ್ಟಚಟಗಳ ನೇಮಕ
ತಮ್ಮ ಬದುಕಿಗೆ ತಾವೇ ಆಗುವೆವು ಖಳನಾಯಕ

ಒಮ್ಮೆ ಈ ಕೂಪಕ್ಕೆ ಬಿದ್ದವರು ಎದ್ದದ್ದು ಕಡಿಮೆ
ನಿತ್ಯ ಶುರುವಾಗುವುದು ಇದರದ್ದೇ ಯೋಚನೆ ಯಾಥನೆ
ಬಿಟ್ಟುಬಿಡಿ ಇದರ ಸೇವನೆ ವಾಸನೆ
ಕೆಡಿಸುವುದು ಮನಮನೆ ಇದು ಏಕೆ ಸುಮ್ಮನೆ

ಓದುವ ಹಂಬಲ ಇದರಿಂದ ದೂರ ದೂರ
ಕಾಯಕ ಮಾಡುವ ಮನಸಿಗಂತೂ ತುಂಬಾ ಬಾರ ಬಾರ
ನಶೆಯ ಬಲೆಗೆ ಸಿಲುಕಿದ ಮರುಕ್ಷಣವೇ ಸಾವಿಗೆ ಹತ್ತಿರ ಹತ್ತಿರ
ಗೆಳೆಯರೇ ನಮ್ಮ ಕನಸು ಮನಸ್ಸುಗಳ ಹಾಳು ಮಾಡದಿರಿ ಎಚ್ಚರ ಎಚ್ಚರ

ಗಿರೀಶ್ ಪಿಎಂ
ವಿವಿ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here