ನಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೊಮ್ಮಗಳು : ಪ್ರಿಯಾಂಕಾ ಗಾಂಧಿ

0
194
Tap to know MORE!

ಉತ್ತರ ಪ್ರದೇಶ ಸರ್ಕಾರವು ತನಗೆ ಬೆದರಿಕೆ ಹಾಕಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಹೇಳಿದ್ದಾರೆ. “ನಾನು ಇಂದಿರಾ ಗಾಂಧಿ ಅವರ ಮೊಮ್ಮಗಳು, ಕೆಲವು ವಿರೋಧ ಪಕ್ಷದ ನಾಯಕರಂತೆ, ಅಘೋಷಿತ ಬಿಜೆಪಿ ವಕ್ತಾರನಲ್ಲ” ಎಂದು ಅವರು ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿಯವರ ಪ್ರಕಾರ, ಅವರು ಸತ್ಯವನ್ನು ಮಾತನಾಡಿದ್ದಕ್ಕಾಗಿ ಯೋಗಿ ಆದಿತ್ಯನಾಥ್ ಸರ್ಕಾರವು ಅವಳನ್ನು ಬೆದರಿಸುತ್ತಿದೆ.

ಕಾನ್ಪುರದ ಆಶ್ರಯ ಮನೆಯ ವಿರುದ್ಧ ಪ್ರಿಯಾಂಕಾ ಗಾಂಧಿಯವರು ಮಾಡಿದ ಒಂದು ಕಾಮೆಂಟ್‌ಗೆ ಉತ್ತರ ಪ್ರದೇಶದ ಮಕ್ಕಳ ಹಕ್ಕುಗಳ ಸಮಿತಿ ನೋಟಿಸ್ ಕಳುಹಿಸಿದ ಬಳಿಕ ಈ ಹೇಳಿಕೆ ಬಂದಿದೆ. ಈ ನಿಟ್ಟಿನಲ್ಲಿ ಸಮಿತಿಯು, ಮೂರು ದಿನಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ಕಾಂಗ್ರೆಸ್ ಮುಖಂಡರನ್ನು ಕೇಳಿದೆ.

ಸರ್ಕಾರಿ ಮಕ್ಕಳ ಆಶ್ರಯ ಮನೆಯಲ್ಲಿ ಇಬ್ಬರು ಬಾಲಕಿಯರು ಗರ್ಭಿಣಿಯಾಗಿದ್ದಾರೆ ಎಂಬ ಮಾಧ್ಯಮ ವರದಿಯ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದಿದ್ದರು. ಇಂತಹ ಕೇಂದ್ರಗಳಲ್ಲಿ, ತನಿಖೆಯ ಹೆಸರಿನಲ್ಲಿ ಸತ್ಯಗಳನ್ನು ನಿಗ್ರಹಿಸಲಾಗುತ್ತಿದೆ ಎಂದಿದ್ದರು.

“ಜನರ ಸೇವಕಳಾಗಿ, ಉತ್ತರ ಪ್ರದೇಶದ ಜನರ ಮುಂದೆ ಸತ್ಯವನ್ನು ಹೊರಹಾಕುವುದು ನನ್ನ ಕರ್ತವ್ಯವೇ ಹೊರತು ಸರ್ಕಾರವನ್ನು ಹೊಗಳಿ ಅವರ ಪ್ರಚಾರವನ್ನು ಮಾಡುವುದು ಅಲ್ಲ. ಉತ್ತರ ಪ್ರದೇಶ ಸರ್ಕಾರ ತನ್ನ ವಿವಿಧ ಇಲಾಖೆಗಳ ಮೂಲಕ ನನಗೆ ಬೆದರಿಕೆ ಹಾಕಿ ಸಮಯ ವ್ಯರ್ಥ ಮಾಡುತ್ತಿದೆ ”ಎಂದು ಪ್ರಿಯಾಂಕಾ ಗಾಂಧಿ ಶುಕ್ರವಾರ ಟ್ವೀಟರ್ ನಲ್ಲಿ ತಿಳಿಸಿದ್ದಾರೆ. “ಅವರು ಬಯಸಿದ ಯಾವುದೇ ಕ್ರಮ ತೆಗೆದುಕೊಳ್ಳಬಹುದು. ಆದರೆ ನಾನು ಸತ್ಯವನ್ನು ಮುಂದಿಡುತ್ತೇನೆ. ನಾನು ಇಂದಿರಾ ಗಾಂಧಿಯವರ ಮೊಮ್ಮಗಳು ಕೆಲವು ವಿರೋಧ ಪಕ್ಷದ ನಾಯಕರಂತೆ ಅಘೋಷಿತ ಬಿಜೆಪಿ ವಕ್ತಾರನಲ್ಲ ”ಎಂದು ಅವರು ಕಟ್ಟುನಿಟ್ಟಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here