ನಾನೊಂದು ಕವಿತೆ ಬರೆಯಬೇಕು ಕವಿತೆ ಹೇಗಿರಬೇಕೆಂದರೆ..
ದ್ವೇಷವಳಿದು ಪ್ರೀತಿ ಜನಿಸುವಂತಿರಬೇಕು…ಕ್ರಾಂತಿಯ ಕಿಚ್ಚಾರಿ ಶಾಂತಿಯ ದೀಪ ಬೆಳಗುವಂತಿರಬೇಕು…
ಜಾತಿಯ ಶಾಖ ಕರಗಿ
ಏಕತೆಯ ಕಿರಣ ಬೆಳಗುವಂತಿರಬೇಕು..ಶ್ರೀಮಂತಿಕೆಯ ದರ್ಪವಿಳಿದು ಬಡತನದ ಬೇಗೆ ತಿಳಿಯುವಂತಿರಬೇಕು…
ಮೃಗೀಯತೆಯ ಸಂಚಡಗಿ ಮನುಷ್ಯತ್ವದ ಮಿಂಚು ಮಿಂಚುವಂತಿರಬೇಕು…
ಮೂಡತೆಯ ಕಟ್ಟೆಯೊಡೆದು ವಿಜ್ಞಾನದ ಝರಿ ಹರಿಯುವಂತಿರಬೇಕು..
ಅನಾಗರೀಕತೆಯ ಬುಡವೊಡೆದು ನಾಗರೀಕತೆ ಚಿಗುರುವಂತಿರಬೇಕು..
ಅನ್ಯಾಯದ ಕಣ್ಕಟ್ಟು ಕಳಚಿ ನ್ಯಾಯ ಕಣ್ಬಿಡುವಂತಿರಬೇಕು…
ಮೋಸದ ಮೋಡ ಬಿರಿದು ವಿಶ್ವಾಸದ ಮಳೆ ಸುರಿಯುವಂತಿರಬೇಕು…
ಕವಿತೆಯ ಸಾಲುಗಳನ್ನರಿತು ಓದುಗ ಬದಲಾಗುವಂತಿರಬೇಕು…
ಮನದೊಳಿದ್ದ ಮಿಥ್ಯೆಗಳಿಗೆಲ್ಲ ಪರದೆಯನ್ನೆಳೆಯುವಂತಿರಬೇಕು…
ಬರೆದಷ್ಟು ಮುಗಿಯದು ನನ್ನೀ ಕವನ …
ಓದುತಿಹ ನಿನಗಿದೋ ಕೋಟಿ ಕೋಟಿ ನಮನ..
ನಯನ್ ಕುಮಾರ್
ವಿ.ವಿ.ಕಾಲೇಜು ಮಂಗಳೂರು