ನಾಭಿ-ಚಕ್ರ

0
321
Tap to know MORE!

ಅಯ್ಯೋ!!! ಈ ಪಕ್ಕದ್ಮನೆಯವರಿಗೆ ಏನ್ ತಿಂದ್ರು ಅರಗತ್ತೆ. ಊರಲ್ಲಿಲ್ಲದೇ ಇರೋ ಎಲ್ಲಾ ಚಟಗಳು ಇದ್ರು ಎಷ್ಟ್ ಗಟ್ಟಿಮುಟ್ಟಾಗಿದ್ದಾರೆ.ಆದ್ರೆ ನಾನು ಸಾತ್ವಿಕ ಆಹಾರ ತಿನ್ನೋದು, ಎಣ್ಣೆನೂ ಹೊಡಿಯಲ್ಲ,ತಂಬಾಕು ಸೇವಿಸಲ್ಲ. ಆದರೂ ಒಂದಲ್ಲ ಒಂದು ಖಾಯಿಲೆ ಕಸಾಲೆ ತಪ್ಪಿದ್ದಲ್ಲ ಅಂತ ಹೇಳೋರಿಗೆ, ಇದ್ಯಾಕೆ ಅಂತ ಯೋಚನೆ ಮಾಡಿದರೆ ಒಂದು ತೆರನಾದ ಉತ್ತರ ಇಲ್ಲಿದೆ.

ತಾಯಿಯ ಗರ್ಭದಲ್ಲಿರುವ ಶಿಶುವಿಗೆ ಮೊದಲು ಬೆಳೆಯುವ ಅಂಗವೇ “ನಾಭಿ”. ಸಾಮಾನ್ಯವಾಗಿ “ಹೊಕ್ಕುಳ” ಎಂದು ಕರೆಯುತ್ತಾರೆ. ಇದರಿಂದ ಜರಾಯುವಿನ ಮೂಲಕ ಆಹಾರ, ಪೋಷಕಾಂಶಗಳು ಶಿಶುವಿಗೆ ಪೂರೈಕೆಯಾಗುತ್ತದೆ. ಇಡೀ ದೇಹವನ್ನೇ ತೆಗೆದುಕೊಂಡರೆ ನಾಭಿ ಮಧ್ಯಭಾಗದಲ್ಲಿದಲ್ಲಿ ಸ್ಥಿತವಾಗಿದೆ.ಇದರ ಬಲಭಾಗದಲ್ಲಿ ಯಕೃತ್ತು (Liver), ಎಡಭಾಗದಲ್ಲಿ ಮೇದೋಜೀರಕ ಗ್ರಂಥಿ ( Pancreas)
ಹಾಗೆ ಕೆಳಭಾಗದಲ್ಲಿ ಮೂತ್ರಕೋಶ, ಹಿಂಭಾಗದಲ್ಲಿ ಬೆನ್ನುಹುರಿ (spinal cord) ಇತ್ಯಾದಿ ಕೋಶಗಳು ಒಂದಲ್ಲ ಒಂದು ರೀತಿಯಲ್ಲಿ ಜೋಡಣೆಯಾಗಿದೆ.

ಕೆಲವು ತಾಯಂದಿರ‌ ದೂರು ‌ಹೀಗಿರತ್ತೆ: ನನ್ನ ಮಗಳು ಯಾ ಮಗ ಚೆನ್ನಾಗಿ ಓದ್ತಾಯಿದ್ರು.ಮೊನ್ನೆ ಎಡವಿ ಬಿದ್ದ ಮೇಲೆ ಏನೋ ಮಂಕು, ಒಂದಲ್ಲ ಒಂದು ಖಾಯಿಲೆ ಅಂತ.ಇದು “ನಾಭಿ ಜರುಗುವುದು” ಅಂತ ನಮ್ಮ ಹಿರಿಯರು ಹೇಳ್ತಾ ‌ಇದ್ರು.ಈ ಮೇಲೆ ಹೇಳಿದಂತೆ ಹೊಕ್ಕುಳ ಸ್ವಲ್ಪ ಸರಿದರೂ ಅಕ್ಕ ಪಕ್ಕದಲ್ಲಿರುವ ಎಲ್ಲಾ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ಅದು ಯಾವ ಅಂಗದ ಮೇಲೆ ಪೆಟ್ಟು ಬೀಳತ್ತೋ ಅದಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳುತ್ತದೆ.ಇದು ಗೊತ್ತಿಲ್ಲದೆ ಆಕಸ್ಮಿಕವಾಗಿ ಸಂಭವಿಸಿದ್ರೆ, ಇನ್ನು ಗೊತ್ತಿದ್ದೂ ತಪ್ಪು ಮಾಡುವುದೇನೆಂದ್ರೆ ಇಂದಿನ ಉಡುಗೆ ತೊಡುಗೆಯ ಶೈಲಿ.ಇದೂ ಕೂಡ ಪರೋಕ್ಷವಾಗಿ ಕಾರಣವಾಗಿದೆ.

ಹಿಂದಿನ ಕಾಲದಲ್ಲಿ ಗಮನಿಸಿರಬಹುದು ರೈತರು, ಕೂಲಿ ಯಾಳುಗಳು ಯಾವಾಗಲೂ ಒಂದು ರುಮಾಲನ್ನು ತಲೆಗೆ ಸುತ್ತಿ ಕೊಳ್ಳುತ್ತಿದ್ದರು. ಅದೇ ಭಾರದ ವಸ್ತುವನ್ನು ಎತ್ತಬೇಕಾದರೆ ಆ ರುಮಾಲನ್ನು ಸೊಂಟಕ್ಕೆ,ನಾಭಿಯ ನೇರಕ್ಕೆ ಬಿಗಿದು ಕೆಲಸ ಮಾಡುತ್ತಿದ್ದರು. ಅತಿ ಬಿಗಿಯಾದ , ಭಾರವಾದ ಕೆಲಸ ಮಾಡುತ್ತಿರಲು ಹೊಕ್ಕುಳ ಸರಿಯಬಾರದೆಂಬ ಆರೋಗ್ಯ ದೃಷ್ಟಿಯಿಂದ.

ಇನ್ನೂ ಹೇಳಬೇಕೆಂದರೆ ಈಗಲೂ ನಮ್ಮ ಸೈನಿಕರು ಹಾಗೂ ಆರಕಕ್ಷ (ಪೋಲಿಸ್) ಪಡೆಯಲ್ಲಿ ಸೊಂಟಕ್ಕೆ ಬಿಗಿಯಾಗಿ ಬೆಲ್ಟ್ ಧರಿಸುತ್ತಾರೆ.ಹಾರುವಾಗ ಯಾ ಬಂದೂಕನ್ನು ಎತ್ತುವಾಗ ನಾಭಿಯ ಮೇಲೆ ಪರಿಣಾಮ ಬೀರಬಾರದೆಂದು.
ನಮ್ಮ ಹಿರಿಯರು ಪಂಚೆ ಉಡುವಾಗಲೂ ಸೊಂಟಕ್ಕೆ ನೇರವಾಗಿ ಗಂಟು ಹಾಕಿ ತೊಡುತ್ತಿದ್ದರು.ಹಾಗೆಯೇ ಮಹಿಳೆಯರು ನಾಭಿಯ ನೇರಕ್ಕೆ ಸೀರೆ ಉಟ್ಟು ಸೊಂಟದ ಪಟ್ಟಿಯನ್ನು ಹಾಕುವ ಉದ್ದೇಶ ಇದೇ ಆಗಿತ್ತು.
ಆದರೆ ‌ಇತ್ತೀಚಿನ ದಿನಗಳಲ್ಲಿ ಆಧುನಿಕರಣ ಹೆಸರಲ್ಲಿ ಧರಿಸುವ ಉಡುಪಿನ ಬಗೆ, ವಿಧವಿಧವಾಗಿದೆ.ಹೊಕ್ಕಳಿನ ಅರ್ಧ ಅಡಿ ಕೆಳಗೆ ತೊಡುವ ಇತರೆ ಬಟ್ಟೆಗಳು, low-rise(waist) ಪ್ಯಾಂಟ್ಗಳ ಫ್ಯಾಷನ್ ಯುಗದ ಚಮತ್ಕಾರ ಒಂದಾ..ಎರಡಾ..!!!.

ಉಡುಗೆ ತೊಡುಗೆಯಲ್ಲೂ ನಮ್ಮ ಹಿರೀಕರ ಆರೋಗ್ಯ ಕಾಳಜಿ ಇಲ್ಲಿ ಗಮನಿಸಬೇಕಾದ ‌ಅಂಶ.ಇದಕ್ಕೂ ಆರ್ಯುವೇದದ ಮೂಲಕ ಋಷಿ ಮುನಿಗಳು ಕೊಡುಗೆಯನ್ನಿತ್ತಿದ್ದಾರೆ.ಇದನ್ನು ಯಾವುದೇ ಔಷಧ ಇಲ್ಲದೇ ಕೇವಲ ನಾಭಿ-ಚಿಕಿತ್ಸೆಯ ಮೂಲಕ ಗುಣಪಡಿಸಬಹುದು.
ಆಧುನೀಕರಣದ ವಿರೋಧಿಯಾಗಿ ನಾನಿಲ್ಲಿ ಬರೆದಿಲ್ಲ.ಆದರೆ ಪಾಶ್ಚಿಮಾತ್ಯದ ಹೆಸರಿನಲ್ಲಿ ಎಷ್ಟೊಂದು ಬದಲಾವಣೆಯಾಗಿದೆ ನಮ್ಮ ಪರಂಪರೆ, ಉಡುಗೆ-ತೊಡುಗೆ. ಈ ಪಾಶ್ಚಿಮಾತ್ಯದ ಬಿರುಗಾಳಿಗೆ ಸಿಲುಕಿ ನಮ್ಮ ಆರೋಗ್ಯವನ್ನು ಎಷ್ಟು ಕಡೆಗಣಿಸಿದ್ದೇವಲ್ಲವೇ??. ಲೇಖನಿಯನ್ನು ಕೆಳಗಿಸುವ ಭಾರ ನನ್ನದು. ಇನ್ನು ಯೋಚನೆಯ ಹೊಣೆ ನಿಮ್ಮದು.

– ಜಪ
ಕುಂದಾಪುರ

LEAVE A REPLY

Please enter your comment!
Please enter your name here