ರಾಜ್ಯಸಭಾ ಚುನಾವಣೆ : ಗಸ್ತಿ ಸ್ಥಾನಕ್ಕೆ ಬಿಜೆಪಿಯಿಂದ ಮಂಗಳೂರು ಮೂಲದ ಡಾ| ಕೆ. ನಾರಾಯಣ್ ಆಯ್ಕೆ!

0
149
Tap to know MORE!

ಬೆಂಗಳೂರು, (ನ.17): ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾಗಿದ್ದ ಕರ್ನಾಟಕ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ್ದು,  ಮತ್ತೆ ಕಾರ್ಯಕರ್ತರಿಗೆ ಮಣೆ ಹಾಕಿದೆ.

ಅಚ್ಚರಿ ಎಂಬಂತೆ ರಾಯಚೂರಿನ ಅಶೋಕ್ ಗಸ್ತಿ ಅವರಿಗೆ ರಾಜಸಭಾ ಸ್ಥಾನ ನೀಡಲಾಗಿತ್ತು. ಇದೀಗ ರಾಜ್ಯಸಭಾ ಉಪಚುನಾವಣೆಗೆ ಮಂಗಳೂರಿನ ಡಾ.ಕೆ.ನಾರಾಯಣ್ ಅವರನ್ನ ಬಿಜೆಪಿ ಆಯ್ಕೆ ಮಾಡಿದೆ.

ಇದನ್ನೂ ಓದಿ: 2023ರಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ : ನಿಖಿಲ್

ಮಾಜಿ ಎಂಎಲ್‌ಸಿ ಎನ್. ಶಂಕ್ರಪ್ಪ, ಅಶೋಕ್ ಗಸ್ತಿ ಪತ್ನಿ ಉಮಾ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸುರಾನ ಅವರ ಹೆಸರು ಕೇಳಿಬಂದಿದ್ದವು. ರಾಜ್ಯ ಬಿಜೆಪಿ ಸಹ ಈ ಮೂವರ ಪಟ್ಟಿಯನ್ನ ಹೈಕಮಾಂಡ್‌ಗೆ ರವಾನಸಿತ್ತು. ಆದ್ರೆ, ಹೈಕಮಾಂಡ್ ರಾಜ್ಯ ಬಿಜೆಪಿ ಪಟ್ಟಿಯನ್ನು ತಿರಸ್ಕರಿಸಿದ್ದು, ತನ್ನ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದೆ.

ಅನಾರೋಗ್ಯದಿಂದ ಅಶೋಕ್ ಗಸ್ತಿ ಸಾವನ್ನಪಿದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಒಂದು ಸ್ಥಾನ ತೆರವಾಗಿದೆ. ಅದಕ್ಕೆ ಉಪಚುನಾವಣೆ ದಿನಾಂಕ ಸಹ ಪ್ರಕಟವಾಗಿದ್ದು, ಇದೇ ಡಿಸೆಂಬರ್‌ 1 ರಂದು ಮತದಾನ ನಡೆಯಲಿದೆ.

LEAVE A REPLY

Please enter your comment!
Please enter your name here