ನಾಲ್ಕು ದಿನದ ಜೀವನ

0
262
Tap to know MORE!

ಆದರೆ ಹೋದರೆ ನಾಲ್ಕು ದಿನದ ಜೀವನ
ಎಲ್ಲರೂ ನಗುತ್ತಾ ಖುಷಿಯಾಗಿ ಇರೋಣ
ಅಸೂಯೆ ಕೋಪದಿಂದ ಜೀವನ ದೂರ
ಆ ದಿನದಿಂದ ಜೀವನ ಎಷ್ಟು ಸುಂದರ

ನಗುವ ಮುಖವಿಂದು ಎಲ್ಲಿದೆ?
ಸಹಕಾರ ಜಗದಲ್ಲಿ ಮಾಯವಾಗಿದೆ
ಒಬ್ಬನ ಕೀರ್ತಿಯ ಸಹಿಸದು
ಯಾರ ಶ್ರೇಯಸ್ಸನ್ನು ಬಯಸದು

ಲೋಕದಲ್ಲಿ ಇಂದು ಎಲ್ಲವೂ ಮೋಸ
ನಿನ್ನಯ ಹಾಗೆ ಇಲ್ಲ ಯಾರ ಮೇಲೂ ವಿಶ್ವಾಸ
ಎಲ್ಲವೂ ಕಂಡು ಕಾಣದಂತಿದೆ ಈ ಜಗ
ಇದು ಸರಿಯಾಗುವುದು ಯಾವಾಗ?

ಪ್ರೀತಿಯು ಮಾನವನ ಹೃದಯದಿ ಅರಳಲಿ
ಹಿಂದಿನ ಕಾಲ ಇನ್ನೊಮ್ಮೆ ಬರಲಿ
ನಗುವು ಮನದಿಂದ ಬರಲಿ
ನಗುವು ಹಣದಿಂದ ಬರದಿರಲಿ

ಗಿರೀಶ್ ಪಿ.ಎಂ
ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here