ನಾಳೆಯಿಂದ ಭಾರತದಲ್ಲಿ ಟ್ವಿಟ್ಟರ್, ಫೇಸ್ಬುಕ್ ಬ್ಯಾನ್?

0
282
Tap to know MORE!

ಹೊಸದಿಲ್ಲಿ: ಸದ್ಯದಲ್ಲೇ ದೇಶಾದ್ಯಂತ ಫೇಸ್‌ಬುಕ್‌, ಟ್ವಿಟರ್‌ ಬ್ಯಾನ್‌ ಆಗಲಿವೆಯೇ? ಡಿಜಿಟಲ್‌ ಕಂಟೆಂಟ್‌‌ಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರಕಾರ ಜಾರಿ ಮಾಡಿರುವ ನಿಯಮಗಳನ್ನು ಟ್ವಿಟರ್‌, ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂ ಸೇರಿದಂತೆ ಬಹುತೇಕ ಸಾಮಾಜಿಕ ಜಾಲತಾಣಗಳು ಇನ್ನೂ ಅನುಸರಿಸಿಲ್ಲ. ಮಂಗಳವಾರದಿಂದಲೇ ಈ ನಿಯಮಗಳು ಜಾರಿಗೆ ಬರಲಿದ್ದು, ನಿಯಮ ಪಾಲಿಸದ ತಾಣಗಳನ್ನು ಸರಕಾರ ಬ್ಲಾಕ್‌ ಮಾಡುವ ಸಾಧ್ಯತೆ ಅಧಿಕವಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನಿಯಮ ಪಾಲನೆ ಅಧಿಕಾರಿಗಳ ನೇಮಕ, ಭಾರತದಲ್ಲಿರುವ ಆ ಅಧಿಕಾರಿಗಳ ಹೆಸರು ಮತ್ತು ಸಂಪರ್ಕ ಸಂಖ್ಯೆ ಸಲ್ಲಿಕೆ, ದೂರುಗಳು ಬಂದರೆ ಕೂಡಲೇ ಪರಿಹರಿಸುವುದು, ಆಕ್ಷೇಪಾರ್ಹ ಕಂಟೆಂಟ್‌ ಗಳ ಮೇಲೆ ನಿಗಾ ಇಡುವುದು ಮತ್ತು ಅವುಗಳನ್ನು ತೆಗೆದುಹಾಕುವುದು ಸೇರಿದಂತೆ ಕೆಲವೊಂದು ನಿಯಮಗಳನ್ನು ಪಾಲಿಸುವಂತೆ ಕಳೆದ ಫೆ.25ರಂದು ಸರಕಾರ ಸೂಚಿಸಿತ್ತು. ಜತೆಗೆ ಇದನ್ನು ಪೂರ್ಣಗೊಳಿಸಲು 3 ತಿಂಗಳ ಗಡುವು ನೀಡಿತ್ತು. ಮೇ 25ರಂದು ಈ ಗಡುವು ಮುಗಿದಿದ್ದು, ಜಾಲತಾಣಗಳಿಗೆ ನಿಷೇಧದ ಭೀತಿ ಶುರುವಾಗಿದೆ.

LEAVE A REPLY

Please enter your comment!
Please enter your name here