ನಾಳೆ ರಾತ್ರಿಯಿಂದ 55 ಘಂಟೆಗಳ ಕಾಲ ಉತ್ತರ ಪ್ರದೇಶ ಲಾಕ್ !

0
163
Tap to know MORE!

ಭಾರತದ ಪ್ರತಿಯೊಂದು ರಾಜ್ಯದಲ್ಲೂ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ದೇಶವಿಡೀ ಲಾಕ್ಡೌನ್ ಮಾಡಲು ಕೇಂದ್ರ ನಿರ್ಧರಿಸುತ್ತಿಲ್ಲ. ಆದರೂ ಕೆಲವು ರಾಜ್ಯ ಸರಕಾರಗಳು ತಮ್ಮ ರಾಜ್ಯಕ್ಕೆ ಸೀಮಿತ ಅವಧಿಯ ಲಾಕ್ಡೌನ್ ಗಳನ್ನು ವಿಧಿಸುವ ಮೂಲಕ ಕೊರೋನಾ ಹಬ್ಬುವಿಕೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ. ಇಂತಹ ರಾಜ್ಯಗಳ ಪಟ್ಟಿಗೆ ಇದೀಗ ಹೊಸ ಸೇರ್ಪಡೆ ಉತ್ತರ ಪ್ರದೇಶ.

ಜುಲೈ 10 ರ ಶುಕ್ರವಾರ ರಾತ್ರಿ 10 ಗಂಟೆಯಿಂದ ಜುಲೈ 13 ರ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಉತ್ತರ ಪ್ರದೇಶದಲ್ಲಿ ಲಾಕ್ಡೌನ್ ಜಾರಿಗೊಳಿಸುವುದಾಗಿ ಸರ್ಕಾರ ಘೋಷಿಸಿದೆ.

ಎಲ್ಲಾ ಕಚೇರಿಗಳು, ಮಾರುಕಟ್ಟೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಆದರೆ, ಅಗತ್ಯ ಸೇವೆಗಳನ್ನು ಅನುಮತಿಸಲಾಗುವುದು ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ರೈಲುಗಳು ಸಹ ಚಾಲನೆಯಲ್ಲಿ ಮುಂದುವರಿಯಲಿವೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಉತ್ತರ ಪ್ರದೇಶ ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 31,156 ರಷ್ಟಿದೆ.

ಈ ಪೈಕಿ 9,980 ಸಕ್ರಿಯ ಪ್ರಕರಣಗಳು, 20,331 ಜನರನ್ನು ಗುಣಪಡಿಸಲಾಗಿದೆ ಅಥವಾ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 845 ಆಗಿದೆ.

LEAVE A REPLY

Please enter your comment!
Please enter your name here