ನಾಳೆ ಹೊರಡಲಿದೆ ದೇಶದ ಮೊದಲ “ಕಿಸಾನ್ ರೈಲು”

0
206
Tap to know MORE!

ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಘೋಷಿಸಿರುವ ‘ಕಿಸಾನ್ ರೈಲು ಯೋಜನೆ’ ಶುಕ್ರವಾರ(ಆಗಸ್ಟ್ 7) ಪ್ರಾರಂಭವಾಗುವ ಸಾಧ್ಯತೆ ಇದೆ. ದೇಶದ ಮೊಟ್ಟಮೊದಲ ಕಿಸಾನ್ ರೈಲು ಮಹಾರಾಷ್ಟ್ರ ಮತ್ತು ಬಿಹಾರ ನಡುವೆ ಚಲಿಸಲಿದೆ.

ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಕಿಸಾನ್ ರೈಲು’ ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಅದರಂತೆ ಮೊದಲ ರೈಲು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮಹಾರಾಷ್ಟ್ರದಿಂದ ಹೊರಡಲಿದೆ.

ಪಿಪಿಪಿ ಮಾದರಿಯ ರೈಲು, ರೈತರಿಗೆ ತರಕಾರಿಗಳು, ಹಣ್ಣುಗಳು ಮತ್ತು ಹೂವಿನ ಉತ್ಪನ್ನಗಳನ್ನು ಸಾಗಿಸಲು ಅನುಕೂಲವಾಗಲಿದೆ. ‘ಕಿಸಾನ್ ರೈಲು’ ಮಹಾರಾಷ್ಟ್ರದ ದೇವಲಾಲಿಯಿಂದ ಬೆಳಿಗ್ಗೆ 11 ಗಂಟೆಗೆ ಹೊರಡುವ ರೈಲು, ಮರುದಿನ ಸಂಜೆ 6.45 ರ ಸುಮಾರಿಗೆ ಬಿಹಾರದ ದಾನಪುರ ತಲುಪಲಿದೆ. ಈ ರೈಲು 31.45 ಗಂಟೆಗಳಲ್ಲಿ 1,519 ಕಿ.ಮೀ ದೂರವನ್ನು ಕ್ರಮಿಸಲಿದೆ ಎಂದು ಭಾರತೀಯ ರೈಲ್ವೆ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ನಾಸಿಕ್‌ನ ರೈತರು ಹೆಚ್ಚಿನ ಸಂಖ್ಯೆಯ ತರಕಾರಿಗಳು, ಹಣ್ಣುಗಳು, ಹೂವುಗಳು, ಕಾಳುಗಳು ಮತ್ತು ಈರುಳ್ಳಿಗಳನ್ನು ಬೆಳೆಯುತ್ತಾರೆ. ಈ ಕೃಷಿ ಉತ್ಪನ್ನಗಳನ್ನು ದೇಶದ ವಿವಿಧ ಭಾಗಗಳಿಗೆ ಸಾಗಿಸಲು ಕಿಸಾನ್ ರೈಲು ಸಹಾಯ ಮಾಡುತ್ತದೆ. ಕಿಸಾನ್ ರೈಲು ಪ್ರಸ್ತುತ ವಾರಕ್ಕೊಮ್ಮೆ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ರೈಲ್ವೆ ಇಲಾಖೆಯು ಇದನ್ನು ಶೀಘ್ರದಲ್ಲೇ, ಇತರ ರಾಜ್ಯಗಳಿಗೆ ವಿಸ್ತರಿಸುವ ಬಗ್ಗೆ ಯೋಚಿಸುತ್ತಿದೆ.

LEAVE A REPLY

Please enter your comment!
Please enter your name here