ನಾ ಕಂಡ ನಮ್ಮವರು.‌..

0
92

ಅಂದೊಂದು ದಿನ ಸ್ಟೇಟ್ ಬ್ಯಾಂಕಿನಲ್ಲಿ ಇಳಿದು ಕಾಲೇಜಿಗೆ ನಡೆಯುತ್ತಾ ಬಂದೆ.ಮಂಗಳೂರಿನ ಪರಿಸರವ ಅನುಭವಿಸಲೆಂದೆ ನಡೆದೆ,ನಡೆಯುವ ಕಾಲ್ಗಳಿಗೆ ಒಮ್ಮೆಗೇ ಗರಬಡಿದಂತಾಯಿತು,ಚುರುಕಿನ ಕಂಗಳು ಆಶ್ಚರ್ಯಕ್ಕೀಡಾದವು!
                                     ಬೀದಿಬದಿಯ ಬಸ್ ಸ್ಟಾಪ್ ನಲ್ಲಿ ಪ್ರಯಾಣಿಕರೇ ಕಾಣುತ್ತಿಲ್ಲ ,ಕಾರಣ ತಿಳಿಯದೆ ನಡೆಯುತ್ತಾ ಹೋದಂತೆ  ಮತ್ತೊಂದು ಬಸ್ ಸ್ಟಾಪ್ ಕಂಡಾಕ್ಷಣ ಕಾರಣ ತಿಳಿಯಿತು!

ಅವೆರಡೂ ಅದಾಗಲೇ ಅತಿಥಿಗೃಹಗಳಾಗಿದ್ದವು,ಯಾರ ಹಂಗಿಲ್ಲದ ನಿರಾಶ್ರಿತರಿಗೆ ಅರಮನೆಯಾಗಿದ್ದವು,ಹಸುಗೂಸಿಗೆ ತಾಯ ಮಡಿಲ ಸುಖ ,ಊರ ಬಸವನಿಗೆ ನರಕದಲೂ ಸುಖ!ಹರಿದ ಬಟ್ಟೆ ,ಕೆದರಿದ ಗಡ್ಡ ,ಕೂದಲು:ಸುಕ್ಕುಗಟ್ಟಿದ ದೇಹ ,ಬತ್ತಿಹೋದ ಕೆನ್ನೆ,ಆರಿಹೋದ ದಾಹ,ತೀರಿಹೋದ ಮೋಹ ದಿಂದ ಕೂಡಿದ್ದರು.ಇವರು ಯಾಕೆ ಹೀಗೆ ಎಂದೆನಿಸಿತು ಮನಕೆ.

ನಡೆಯುತ್ತಾ ಮುಂದೆ ಹೋದಂತೆ ಮತ್ತೊಬ್ಬಳು ಬಾಲಕಿ ನನ್ನ ಹತ್ತಿರದಲ್ಲೇ ಹಾದು ಹೋದಳು.ನೋಡಲು ಏಳೆಂಟು ವರ್ಷದವಳಂತೆ ಕಾಣುವಳು,ಧೂಳುತುಂಬಿದ ಬಟ್ಟೆ,ಬಾಚಣಿಗೆ ಹೊಕ್ಕದ ಕೂದಲು,ನಗುವೇ ಮುಗಿದಂತಿರುವ ಮುಖ . ಅವಳು ಮಕ್ಕಲಾಟಿಕೆಯನ್ನು ಮಾರಾಟ ಮಾಡುತ್ತಿದ್ದಳು. ಅವಳ ಹತ್ತಿರ ಒಬ್ಬರೂ ಸುಳಿಯಲಿಲ್ಲ,ಕಣ್ಣೆತ್ತಿ ನೋಡಲಿಲ್ಲ,ಪ್ರೀತಿಯ ಮಾತುಗಳನ್ನಾಡಲಿಲ್ಲ. ಕರುಳು ಕಿತ್ತುಬಂದಂತಾಯಿತು.ನನ್ನೊಬ್ಬನಿಗೆ ಕಷ್ಟ ಎಂದುಕೊಂಡಿದ್ದೆ ,ಇವಳು ಕಂಡಾಗ ನನ್ನ  ಕಷ್ಟ ಏನೂ ಇಲ್ಲ ಎಂದೆನಿಸಿತು.!ಗದ್ಗದಿತವಾಗುತಿದೆ ಗಂಟಲು.
                                          
ಅದೇ ದಿನ ಬಸ್ಸಿನಲ್ಲಿ ಬರುವಾಗ ಪರಂಗಿಪೇಟೆಯಲ್ಲಿ ಅತೀ ವಯಸ್ಸಾದ ಮುಸಲ್ಮಾನ್ ವ್ಯಕ್ತಿಯೊಬ್ಬರು ಆಮೆಯ ಹೆಜ್ಜೆಯಿಟ್ಟು ಬರಲೆತ್ನಿಸಿದರೆ ಕಂಡಕ್ಟರ್,”ಎಂಚಿ ಕರ್ಮದಕುಲು” ಎನ್ನುತ್ತಾರೆ.ಹಿಂದಿನ ಸೀಟಿನಲ್ಲಿದ್ದ ನಾನು ಸೀಟು ಕೊಡಲು ಮುಂದಾದೆ ಎದ್ದು ನಿಂತೆ ಕೂಡ!ಆದರೆ ಅವರು ನನ್ನ ಹತ್ತಿರ ಬರುವಂತಿಲ್ಲ ,ಬಸ್ಸಿನಲ್ಲಿ ನಿಲ್ಲಲು ಜಾಗವಿಲ್ಲ,ಅದ್ಯಾರೋ ಪುಣ್ಯಾತ್ಮ ಸೀಟು ಬಿಟ್ಟುಕೊಟ್ಟರು.

ಮೂರೂ ಸನ್ನಿವೇಶಗಳಲ್ಲಿ ಕಂಡವರೆಲ್ಲ ನನ್ನವರೇ,ಅವರು ಹುಟ್ಟಿದ ಗರ್ಭ ಬೇರೆ ,ಆದರೆ ಅವರಿರುವುದು ಭಾರತೀಯ ಮಡಿಲಲ್ಲಿ ತಾನೆ.

ಸರ್ಕಾರಗಳು ಯೋಜನೆಗಳನ್ನು ಜಾರಿಗೆ ತಂದಿದ್ದರೂ,ಆ ಬಾಲಕಿಗೆ ಅದೆಲ್ಲಿ ಅನ್ಯಾಯವಾಯಿತು.ವಿವೇಕಾನಂದರು ಕೇಳಿದ್ದ ಕಬ್ಬಿಣದಂತಹ ಮಾಂಸಖಂಡದ ಯುವಕರು ಬಸ್ ಸ್ಟಾಪಿನಲ್ಲಿ ನಿರ್ಗತಿಕರಾಗಿದ್ದಾರೆ.ಯಾವ ಧರ್ಮ ಅನ್ನುವುದು ಮುಖ್ಯವಲ್ಲ ,ಮಾನವನ ಸ್ಥಿತಿ ಏನು ಎಂಬುದು ಮುಖ್ಯ.ಇಳಿವಯಸ್ಸಿನವರಿಗೆ ಅಪಮಾನ ಮಾಡುವುದರಿಂದ ಆತನಿಗೇನು ಸಿಕ್ಕಿತು!ಆತನಿಗೂ ವಯಸ್ಸಾಗುವುದಿಲ್ಲವೆ?

ಸಾವು ಹೇಗೆ ಬರುವುದೆಂದು ಯಾರಿಗೂ ತಿಳಿದಿಲ್ಲ.ದೇಹಕ್ಕೆ ಸಂಸ್ಕಾರ ಮಾಡುವವರಾರು ತಿಳಿದಿಲ್ಲ. ದಾರಿಯಲ್ಲಿ ಸತ್ತಾಗ ಜಾತಿ ನೋಡಿದರೆ ನಾವು ರಣಹದ್ದುಗಳ ಆಹಾರವಾಗಬೇಕಾಗುತ್ತದೆ.  ಇರುವಷ್ಟು ದಿವಸ ಮಾನವಿತೆಯಿಂದ ಬಾಳೋಣ.
                                             ಶಿವಪ್ರಸಾದ್ ಬೋಳಂತೂರು
ಪ್ರಥಮ ಬಿ.ಎ(ಪತ್ರಿಕೋದ್ಯಮ ವಿಭಾಗ)
ವಿಶ್ವವಿದ್ಯಾನಿಲಯ ಕಾಲೇಜು,ಮಂಗಳೂರು

LEAVE A REPLY

Please enter your comment!
Please enter your name here