ನಿಜವಾದ ಶ್ರೀಮಂತ ಯಾರು?

0
248
Tap to know MORE!

ಕಾಸು ಇದ್ದವನೆ ಬಾಸು ಎಂಬ ಈ 4 ಜೀ ಕಾಲದಲ್ಲಿ ನಗುವಿಗೆ ಸಾಕಷ್ಟು ಬರವಿರುವುದು ಅಂತೂ ಖಂಡಿತ. ನಕ್ಕರೆ ನಗದ ಜನ. ಕಂಡರೂ ಕಾಣದ ಹಾಗೆ ನಟನೆ. ಒಟ್ಟಿನಲ್ಲಿ ಜಗತ್ತು ಇಂದು ಮಾಯೆಯಾಗಿ ಬದಲಾಗಿದೆ.ನೊಂದವರ ಮನವನ್ನು ನೋಯಿಸುವರು ಹೊರತು ಸಮಾಧಾನಪಡಿಸಲು ಅವರಿಗೆ ತಿಳಿಯದು. ಹಣ ಕಂಡರೆ ಸಾಕು ಬಿದ್ದವನ ಮೆಟ್ಟಲು ಹೇಸದು. ಹಣಕ್ಕಿಂತ ಗುಣ ಬೇಕೆಂದು ತಿಳಿಯದು. ಹಣ ಕೂಡ ಬೇಕು ಆದರೆ ಹಣವೇ ನಮ್ಮನ್ನು ಆಳುವಂತೆ ಇರಬಾರದು.

ಹಣ ಕಂಡರೆ ಸಾಕು ಹೆಣ ಕೂಡ ಬಾಯಿ ಬಾಯಿ ಬಿಡುತ್ತದೆ ಎಂಬ ಮಾತು ಈಗಿನ ಹೆಚ್ಚಿನ ಜನರಿಗೆ ಅನ್ವಯವಾಗುತ್ತದೆ. ಇದು ಈಗಿನ ಹೆಚ್ಚಿನ ಜನರ ಪರಿಪಾಠ ಎಂದರೂ ತಪ್ಪಾಗದು. ಇಂತಹ ಹಲವು ಉದಾಹರಣೆ ನಮ್ಮ ಸುತ್ತಮುತ್ತ ಲು ಕಾಣಬಹುದು. ನಾನು ನೋಡಿದ ಪ್ರಕಾರ ಒಬ್ಬ ವಯಸ್ಸಾದ ಮುದುಕ ಹಸಿವಿನಿಂದ ಅಂಗಲಾಚುತ್ತಿದ್ದ.ಆಗ ಅಲ್ಲಿಗೆ ಬಂದ ಶ್ರೀಮಂತ ವ್ಯಕ್ತಿ ಯೋರ್ವ ಕಂಡು ಕಾಣದಂತೆ ನಟನೆ ಮಾಡಿ ಕಾರು ಹತ್ತಿ ಹೋಗೆಬಿಟ್ಟ. ಈ ಮುದುಕನ ಕಂಡ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಕೈಯಲ್ಲಿದ್ದ ಹಣ್ಣಿನ ಲಕೋಟೆಯನ್ನು ಹಾಗೇ ಕೊಟ್ಟರು . ಆಗ ಆ ಮುದುಕನ ಮುಖದಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ ಸಂತಸಕ್ಕೆ ಪಾರವೇ ಇರಲಿಲ್ಲ. ಈ ದೃಶ್ಯವನ್ನು ಬಸ್ ನಿಲ್ದಾಣದಲ್ಲಿದ್ದ ನಾನು ಗಮನಿಸಿದೆ . ಇದ ನೋಡಿ ಮನ ಕಲುಕಿತು. ಮನದಲ್ಲಿ ಹಲವಾರು ಯೋಚನೆಗಳು ಬರಲಾರಂಭಿಸಿತು. ನಾನು ಕಂಡ ಪ್ರಕಾರ ಇಲ್ಲಿ ನಿಜವಾದ ಶ್ರೀಮಂತ ಯಾರು? ಆ ಶ್ರೀಮಂತ ವ್ಯಕ್ತಿಯೇ? ಅಲ್ಲವೇ ಈ ಸಾಮಾನ್ಯ ವ್ಯಕ್ತಿಯೇ?.ನನ್ನ ಪ್ರಕಾರ ಶ್ರೀಮಂತ ವ್ಯಕ್ತಿಯ ಮನಸ್ಸು ಬಡತನದಿಂದ ಕೂಡಿದೆ ಆದರೆ ಈ ಸಾಮಾನ್ಯ ವ್ಯಕ್ತಿಯ ಅಸಮಾನ್ಯ ಗುಣ ಮತ್ತು ಆತನ ಮನಸ್ಸು ತುಂಬಾ ಶ್ರೀಮಂತಿಕೆಯಿಂದ ಕೂಡಿದೆ. ಆದುದರಿಂದ ನಿಜವಾದ ಶ್ರೀಮಂತ ಅಸಾಮಾನ್ಯ ವ್ಯಕ್ತಿ.

ಗಿರೀಶ್ ಪಿ. ಎಂ
ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here