ನಿರೀಕ್ಷೆಯೇ ನೋವು

0
188
Tap to know MORE!

ಕೊಡಲು ಕೊಳಲು ಒಲವುಬಿಟ್ಟು ಬೇರೆಉಂಟೇ ಬಾಳಲಿ:ಕೊಟ್ಟುದೆಷ್ಟೋ ಪಡೆದುದೆಷ್ಟೋ ನಮ್ಮ‌ನಂಟೇ ಹೇಳಲಿ” ಈ ಕವಿತೆ ಕೇಳಿದಾಗಲೆಲ್ಲ ನನಗೆ ಬರೀ ರೋಮಾಂಚನವಾಗುದಿಲ್ಲ,ಬದಲಿಗೆ ಆ ಜೋಡಿ ಬದುಕಿನಲ್ಲಿ ಕಂಡುಕೊಂಡ ಒಲವಿನ ದಾರಿ ,ಅವರಿಗೆ ಯಶಸ್ಸಿನ ಪಥವಾಗಿರುವುದು ನನಗೆ ಅರಿವಾಗಿತನ್ಮಯನಾಗುತ್ತೇನೆ.‌ ಯಾವುದೇ ನಿರೀಕ್ಷೆಗಳಿರದೆ,ಅಪೇಕ್ಷೆಗಳಿರದೆ ಆ ದಂಪತಿಗಳು ಬದುಕನ್ನ ಅದೆಷ್ಟು ಸಹ್ಯ, ಸುಂದರಗೊಳಿಸಿಕೊಂಡರು!! ನಿರೀಕ್ಷೆಗಳು ಅತಿಯಾದಷ್ಟೂ ತಳಮಳ ಉದ್ವೇಗಗಳೂ, ಅಸಹನೆ ಕೋಪತಾಪಗಳೂ ಹೆಚ್ಚಾಗುತ್ತದೆ. ಪ್ರೀತಿ,ಗೆಳೆತನ,ದಾಂಪತ್ಯ, ಸಂಬಂಧಗಳು ಇಂದು ಹೆಚ್ಚು ಸಂಕೀರ್ಣ ಗೊಂಡು ,ನಿರೀಕ್ಷೆಯ ಭಾರವನ್ನು ಹೊರಲಾರದೇ ಸೋತಿವೆ. ಗಂಡ ಕೃಷಿ ಕೆಲಸ ಮುಗಿಸಿ ದಣಿವಾಗಿ ಹೊಸಿಲ ಬಳಿ ಬಂದೊಡನೆ ಬಾಗಿಲನು ತೆಗೆವ ನನ್ನವಳು ನನ್ನೆದೆಯ ಹೊನ್ನಾಡನಾಳುವ ಹಸಿರು ಕುಪ್ಪಸದಾಕೆ ,ಹೆಸರೇನೆಂದು ಕೇಳಿ ಮುಗುಳುನಗೆ ನಕ್ಕರೆ ಪತಿಯ ಆಯಾಸಗಳೆಲ್ಲ ಆಕ್ಷಣಕ್ಕೇ ಮಾಯವಾಗಿ ಮನಸ್ಸು ಪ್ರಪುಲ್ಲವಾಗದೆ? ಯಾವುದೋಸಮಾರಂಭದಲ್ಲಿ ಒಟ್ಟು ಸೇರಿ ಹರಟೆಹೊಡೆವ ಆಭರಣಸುಂದರಿಯರ ನಡುವೆ ಬಡ ಗರತಿಯೊಬ್ಬಳು ಆತಕೊಟ್ಟ ವಸ್ತುಒಡವೆ ನನಗೆ ಅವಗೆ ಗೊತ್ತು.ತೋಳುಗಳಿಗೆ ತೋಳಬಂದಿ: ಕೆನ್ನೆತುಂಬ ಮುತ್ತು ಯೆಂಬ ಮಾತನ್ನಾಡುವ ಸಂದರ್ಭ ಒದಗಿ ಬಂದರೆ ಆ ದಂಪತಿಗಳ ಬದುಕಿನ‌ ಯಶಸ್ಸಿನ ಗುಟ್ಟೇ ಈ ನಿರೀಕ್ಷೆಗಳಿರದ ಬದುಕು. ಬರೀ ನಿರೀಕ್ಷೆಗಳು ಮತ್ತದರ ಪರಿಪೂರ್ಣತೆಗಾಗಿ ಗುದ್ದಾಡಬೇಕಾದ, ಒದ್ದಾಡಬೇಕಾದ ಜನರ ಬದುಕಲ್ಲಿ ಆನಂದ ನೆಮ್ಮದಿಗಳು ಆನೆಯಷ್ಟು ಭಾರವಾಗುತ್ತವೆ. ಬದುಕುಬೆಳಕಿನ ದಾರಿಯಾಗದೇ ಮಬ್ಬಿನಿಂದ ಮಬ್ಬಿಗೆ ಬೆಳೆಸಿದ ಪಯಣವಾಗುತ್ತದೆ,ಹಗಲಿಡೀ ದುಡಿದು ಹಣ್ಣಾಗಿ,ರೈಲಿನ ಸಾಮಾನ್ಯಬೋಗಿಯಲ್ಲಿ ದೇಹವನ್ನು ತೂರಿಸಿ,ಹೇಗೋ ಇಳಿದು, ಕಣ್ಣರೆಪ್ಪೆಯ ಮೇಲೆ ಮಣಬಾರದ ನಿದ್ದೆಯನ್ನು ಹೇರಿ ಅಪರಾತ್ರಿಯಲ್ಲಿ ಮನೆ ತಲುಪುವಾಗ ,ಅರೆ ನಿದ್ದೆಯ ಹೆಂಡತಿ ಬಾಗಿಲು ತೆರೆದರೆ,ಕಾದೂ ಕಾದೂ ನಿದ್ದೆಹೋದ ಹಸುಕಂದನಿಗೆ ಎಚ್ಚರವೇ ಆಗವುದಿಲ್ಲ!!ಪುನಃ ಬೆಳಗಾಗುವುದರೊಳಗೆ ಹೊಟ್ಟೆಹೊರೆವ ಕಾಯಕದ ಸಲುವಾಗಿ ಅಪ್ಪ ಮತ್ತೆ ಮನೆಬಿಟ್ಟಿರುತ್ತಾನೆ !!!ಹಾಗಾಗಿ ಹಲವುದಿನಗಳವರೆಗೆ ಆ ಕಂದ ತನ್ನಪ್ಪನ ಧ್ವನಿ,ಸ್ಪರ್ಷ,ಅಪ್ಪುಗೆಯಿಂದ ವಂಚಿತ.!! ಇದು ಬರೀ ಮುಂಬೈ ಜಾತಕಮಾತ್ರವಲ್ಲ. ಅತಿಯಾದ ನಿರೀಕ್ಷೆಯ ಪರಿಣಾಮವಾಗಿ ನಾವು ಬದುಕಿನಲ್ಲಿ ಪ್ರತಿನಿತ್ಯ ಅನುಭವುಸುತ್ತಿರುವ ನೋವು.

ದೂರದಅಮೆರಿಕವೋ,ಜರ್ಮನಿಗೋ ಹೊಟ್ಟೆಹೊರೆವ ಕೆಲಸಕ್ಕೆ ಹೋಗಿರುವ ಅಣ್ಣ ಅಲ್ಲಿಯೇ ನೆಲೆಯಾಗುತ್ತಾನೆ,ಇತ್ತ ತನ್ನ ಹಳ್ಳಿಯಲ್ಲಿಅಣ್ಣ ನಿರ್ವಹಿಸಬೇಕಾದ ಮನೆಯ‌ ಜವಬ್ದಾರಿಯನ್ನ ವಹಿಸಿಕೊಂಡ ತಮ್ಮ , ಅಣ್ಣನ ಕನಸುಗಳಿಗಾಗಿ ತ್ಯಾಗಿಯಾಗಿ ಕೃಷಿಗೆ ನಿಲ್ಲುತ್ತಾನೆ. ಅದರೆ ದುರಂತವೆಂದರೆ ನಮ್ಮ ಕೃಷಿ ಪ್ರಧಾನ ಭಾರತದಲ್ಲಿ ಇಂದು ಕೃಷಿಕನಿಗೆ ಹೆಣ್ಣುಸಿಗಲ್ಲ,ಯಾಕಂದರೆ ಇವತ್ತು ಹೆಣ್ಣುಮಕ್ಕಳ ನಿರೀಕ್ಷೆ ಬೇರೆಯಾಗಿದೆ. ಕೊನೆಗೂ ತಮ್ಮನಿಗೆ ಮದುವೆಯಾದರೆ ಅಣ್ಣ ಬರಲಾರ, ಕಾರಣ ಆತನ ಮೇಲೆ ಹೆಚ್ಚುನಿರೀಕ್ಷೆಯಿಟ್ಟ ಕಂಪೆನಿ ದೊಡ್ಡದೊಂದು ಪ್ರಾಜೆಕ್ಟನ್ನು ನೀಡಿದೆ!!! ಹಾಗಾಗಿ ಅಣ್ಣ ಶುಭಾಶಯದ ಮೆಸೇಜ್ ಮಾಡುತ್ತಾನೆ!!!! ಇಂತಹ ಸಂಗತಿಗಳನ್ನು ನೋಡೀನೋಡೀ ಬೇಸರವಾದಾಗ ನಮಗೆ ಕುವೆಂಪು ಚಿತ್ರಿಸಿದ ಐತ ಪಿಂಚುಲು ನೆನಪಾಗುತ್ತಾರೆ.ಯಾವ ನಿರೀಕ್ಷೆಗಳೂಯಿರದ ಬದುಕನ್ನ ಸಹಜವಾಗಿ,ಸುಂದರವಾಗಿ ಅನುಭವಿಸುವ ಆ ಬಡದಂಪತಿಗಳು ಶಿವಪಾರ್ವತಿಯರಂತೆ ಕಾಣುತ್ತಾರೆ,ಜಗತ್ತಿನ ಆದಿಮ ದಂಪತಿಗಳಂತೆ ಕಾಣುತ್ತಾರೆ, ನಮಗೆಲ್ಲ ಜನ್ಮಕೊಟ್ಟ ಆ ದಂಪತಿಗಳ ಮಕ್ಕಳಾದ ನಾವು ಈಗ ಅದೇಕೆ ಈ ಬಗೆಯ ನಿರೀಕ್ಷೆಗಳ ಬೆನ್ನು ಬಿದ್ದಿದ್ದೇವೆ ಅರಿಯದಾಗಿದೆ. ಅತಿಯಾದ ನಿರೀಕ್ಷೆ ಗಳಿಂದ ಗೆಳೆತನಹಾಳಾಗಿದೆ,ಸಂಬಂಧ ದುರ್ಬಲವಾಗಿದೆ ಸಂಸಾರ ಶಿಥಿಲಗೊಂಡಿದೆ, ನಿರೀಕ್ಷೆಗಳೆಂದರೆ ನೋವೇ ಹೌದು. ನಮ್ಮ ಹಿರಿಯರು ಹೇಳುತ್ತಿದ್ದರು. ನಾನು ಏನನ್ನೂ ಬಯಸಲ್ಲ,ಅವನು ನೀಡಿದ್ದನ್ನು ಪಡೆದಿದ್ದೇನೆ,ಅವನ ಆದೇಶದಂತೆ ನಡೆದಿದ್ದೇನೆ, ಹಾಗಾಗಿ ನಾನು ಪರಮ ಸುಖಿ. ಹೌದಲ್ವ!!
(ಹರೀಶ್ ಟಿ‌.ಜಿ)

LEAVE A REPLY

Please enter your comment!
Please enter your name here