ನೀಟ್, ಜೆಇಇ 2020 : ಆರು ರಾಜ್ಯಗಳು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್!

0
206
Tap to know MORE!

ನವದೆಹಲಿ – ಸೆ.4 : ನಿಗದಿತ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ಆರು ರಾಜ್ಯಗಳು ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇವೆರಡೂ ಪರೀಕ್ಷೆಗಳನ್ನು ನಿಗದಿಯಂತೆ ನಡೆಸಬೇಕೆಂದು ಈ ಹಿಂದೆ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ 6 ರಾಜ್ಯಗಳ ಮುಖ್ಯಮಂತ್ರಿಗಳು ನ್ಯಾಯಾಲಯವನ್ನು ಕೋರಿತ್ತು.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಬಿ.ಆರ್.ಗವಾಯಿ, ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಪರಿಶೀಲನಾ ಅರ್ಜಿಯನ್ನು ಇಂದು ಕೈಗೆತ್ತಿಕೊಂಡಿತ್ತು. ಅರ್ಜಿದಾರರಿಗೆ ವಕೀಲರಿಂದ ಯಾವುದೇ ವಿಚಾರಣೆಗಳು ಅಥವಾ ವಾದಗಳನ್ನು ಮಂಡಿಸಲು ಅವಕಾಶ ಇರಲಿಲ್ಲ.

ಇದನ್ನೂ ಓದಿ : ಕೇಂದ್ರ ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿಲ್ಲ : ಸೋನಿಯಾ ಗಾಂಧಿ

ಯಾವ ರಾಜ್ಯಗಳು ಅರ್ಜಿ ಸಲ್ಲಿಸಿದ್ದವು?

ಕೊರೋನಾ ಭೀತಿಯ ನಡುವೆ, ಪ್ರವೇಶ ಪರೀಕ್ಷೆಗಳ ನಡೆಸುವುದನ್ನು ಪ್ರಶ್ನಿಸಿ ಪಂಜಾಬ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ರಾಜ್ಯಗಳು ಆಗಸ್ಟ್ 28 ರಂದು ಸುಪ್ರೀಂ ಕೋರ್ಟ್‌ನಲ್ಲಿ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದವು.

LEAVE A REPLY

Please enter your comment!
Please enter your name here