ಕೊಯಮತ್ತೂರು: ಮುಂಬರುವ ನೀಟ್ ಪರೀಕ್ಷೆಯ ಭಯದಿಂದ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಪೂರ್ವ ವೆಂಕಟಸಾಮಿ ರಸ್ತೆಯ 19 ವರ್ಷದ ವಿದ್ಯಾರ್ಥಿನಿ, ಕಳೆದ ಕೆಲವು ತಿಂಗಳುಗಳಿಂದ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದು, ಇತ್ತೀಚೆಗೆ ಖಿನ್ನತೆಗೆ ಒಳಗಾಗಿದ್ದಳು. ಪರೀಕ್ಷೆಯು ಹತ್ತಿರವಾಗುತ್ತಿದಂತೆ ಇನ್ನಷ್ಟು ಭೀತಿಗೊಳಗಾಗಿ ಹುಡುಗಿ ಈ ಹೆಜ್ಜೆ ಇಟ್ಟಿದ್ದಾಳೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿನಿಯು ಮಂಗಳವಾರ ಸಂಜೆ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮನೆಯವರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ : ನಿಗದಿಯಂತೆ ಸೆಪ್ಟೆಂಬರ್ನಲ್ಲಿ ಜೆಇಇ-ನೀಟ್ ಪರೀಕ್ಷೆ – ಕೇಂದ್ರ ಸರ್ಕಾರದ ಸ್ಪಷ್ಟನೆ
ಎಪ್ರಿಲ್ ನಲ್ಲಿ ನಡೆಯಬೇಕಿದ್ದ ಜೆಇಇ (ಮುಖ್ಯ) 2020 ಮತ್ತು ನೀಟ್-ಪದವಿಪೂರ್ವ ಪರೀಕ್ಷೆಗಳು ಕೊರೋನಾ ಭೀತಿಯಿಂದಾಗಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ಪರೀಕ್ಷಾ ಮಂಡಳಿ ಮುಂದಾಗಿದೆ. ಆದರೆ, ಇನ್ನಷ್ಟು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಮುಂದೂಡುವುದರಿಂದ ಸಮಯ ವ್ಯರ್ಥವಾಗುತ್ತದೆ ಮತ್ತು ಜೀವನವು ಮುಂದುವರಿಯಬೇಕಾಗಿದೆ ಎಂದು ನ್ಯಾಯಾಲಯವು ಹೇಳಿತ್ತು.
ಇದನ್ನೂ ಓದಿ : ಜೆಇಇ, ನೀಟ್ ಮುಂದೂಡುವಂತೆ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್
ಏತನ್ಮಧ್ಯೆ, ಡಿಎಂಕೆ ಶಾಸಕ ಎನ್ ಕಾರ್ತಿಕ್ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದರು. ಪಕ್ಷದ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಘಟನೆ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯನ್ನು ತಕ್ಷಣಕ್ಕೆ ರದ್ದುಗೊಳಿಸಬೇಕು ಎಂದು ಶಾಸಕರು ಕೇಂದ್ರವನ್ನು ಒತ್ತಾಯಿಸಿದರು.