ಇದೇ ಮೊದಲ ಬಾರಿಗೆ, ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ(NEET) ಅಭ್ಯರ್ಥಿಗಳು ಪೂರ್ಣ ಅಂಕಗಳನ್ನು ಪಡೆದಿದ್ದು, ಫಲಿತಾಂಶಗಳನ್ನು ಘೋಷಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಅಧಿಕಾರಿಗಳು ತಿಳಿಸಿದ್ದಾರೆ. ಒಡಿಶಾದ ಶೋಯೆಬ್ ಅಫ್ತಾಬ್ ಮತ್ತು ದೆಹಲಿಯ ಆಕಾಂಕ್ಷಾ ಸಿಂಗ್ 720 ಅಂಕಗಳಲ್ಲಿ 720 ಅಂಕಗಳನ್ನು ಗಳಿಸಿದ್ದಾರೆ.
ಆದರೆ ಎನ್ಟಿಎಯ ಟೈ ಬ್ರೇಕಿಂಗ್ ನೀತಿಯ ಪ್ರಕಾರ ಅಫ್ತಾಬ್ ಪ್ರಥಮ ಮತ್ತು ಸಿಂಗ್ ಎರಡನೇ ಸ್ಥಾನ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀಟ್ನಲ್ಲಿ ಶ್ರೇಣಿಯನ್ನು ನಿರ್ಧರಿಸಲು ಅದೇ ಟೈ ಬ್ರೇಕಿಂಗ್ ನೀತಿಯನ್ನು ಬಳಸಲಾಗುತ್ತದೆ
ನೀಟ್ 2020 ಫಲಿತಾಂಶವನ್ನು ಘೋಷಣೆಯ ದಿನಾಂಕದಿಂದ ಕೇವಲ 90 ದಿನಗಳವರೆಗೆ ಮಾತ್ರ ಡೌನ್ಲೋಡ್ ಮಾಡಬಹುದು ಎಂದು ಅಭ್ಯರ್ಥಿಗಳು ತಿಳಿದಿರಬೇಕು. ನೀಟ್ ಅಧಿಕೃತ ವೆಬ್ಸೈಟ್ಗಳಲ್ಲಿ ಶುಕ್ರವಾರ(ಅ.16) ಸಂಜೆ 5 ಗಂಟೆಗೆ ಫಲಿತಾಂಶಗಳನ್ನು ಪ್ರಕಟಿಸಲಾಯಿತು ಮತ್ತು ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಪರಿಶೀಲಿಸಲು ವೆಬ್ಸೈಟ್ಗಳಿಗೆ ಭೇಟಿ ನೀಡಬಹುದು – antaneet.nic.in ಅಥವಾ mcc.nic.in.
ನೀಟ್ 2020 ಟಾಪರ್ಸ್:
1. ಒಡಿಶಾದ ಸೋಯೆಬ್ ಅಫ್ತಾಬ್ (720)
2. ದೆಹಲಿಯ ಆಕಾಶಾ ಸಿಂಗ್ (720)
3. ತೆಲಂಗಾಣದ ತುಮ್ಮಲಾ ಸ್ನಿಕಿತಾ (715)
4. ರಾಜಸ್ಥಾನದ ವಿನೀತ್ ಶರ್ಮಾ (715)
5. ಹರಿಯಾಣದ ಅಮ್ರೀಶಾ ಖೈತಾನ್ (715)
6. ಆಂಧ್ರಪ್ರದೇಶದ ಗುತಿ ಚೈತನ್ಯ ಸಿಂಧು (715)
ನೀಟ್ ಟೈ ಬ್ರೇಕಿಂಗ್ ಫಾರ್ಮುಲಾ
ನೀಟ್ ಪರೀಕ್ಷೆಯಲ್ಲಿ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಸಮಾನ ಅಂಕಗಳನ್ನು ಗಳಿಸಿದರೆ, ಜೀವಶಾಸ್ತ್ರದಲ್ಲಿ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ಹೆಚ್ಚಿನ ಅಂಕಗಳನ್ನು ಪಡೆಯುವ ಅಭ್ಯರ್ಥಿಗಳಿಗೆ ಶ್ರೇಯಾಂಕದಲ್ಲಿ ಆದ್ಯತೆ ನೀಡಲಾಗುತ್ತದೆ.
ಜೀವಶಾಸ್ತ್ರ ಅಂಕಗಳನ್ನು ಲೆಕ್ಕಹಾಕಿದ ನಂತರ ಟೈ ಅಸ್ತಿತ್ವದಲ್ಲಿದ್ದರೆ, ರಸಾಯನಶಾಸ್ತ್ರದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಅಲ್ಲೂ ಟೈ ಆದರೆ, ನೀಟ್ 2020 ರ ಎಲ್ಲಾ ವಿಷಯಗಳಲ್ಲಿ ಕಡಿಮೆ ಸಂಖ್ಯೆಯ ತಪ್ಪು ಉತ್ತರಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಸಹ ಅನುಕೂಲವನ್ನು ನೀಡಲಾಗುವುದು. ಇಷ್ಟಾದರೂ ಟೈ ಉಳಿದಿದ್ದರೆ, ಕೊನೆಗೆ, ವಯಸ್ಸಿನಲ್ಲಿ ಹಿರಿಯ ನೀಟ್ ಅಭ್ಯರ್ಥಿಗೆ ಆದ್ಯತೆ ನೀಡಲಾಗುತ್ತದೆ.
ಬೀದರ್ನ ಕಾರ್ತಿಕ್ ರೆಡ್ಡಿ ರಾಜ್ಯದ ಟಾಪರ್
ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 9ನೇ ರ್ಯಾಂಕ್ ಪಡೆದಿರುವ ಬೀದರ್ ಮೂಲದ ಕಾರ್ತಿಕ್ ರೆಡ್ಡಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಬೀದರ್ ನ ಕಾರ್ತಿಕ್ ರೆಡ್ಡಿ 720 ಕ್ಕೆ 710 ಅಂಕ ಪಡೆದು ಶೇ.99.99 ಮಾರ್ಕ್ಸ್ ಪಡೆದಿದ್ದಾರೆ, ಆಲ್ ಇಂಡಿಯಾ ರ್ಯಾಂಕಿಂಗ್ ನಲ್ಲಿ ಪುರುಷರಲ್ಲಿ 5ನೇ ಸ್ಥಾನ ಪಡೆದಿದ್ದಾರೆ.