ಕಿನ್ನಿಗೋಳಿ: ದುರಂತ ಘಟನೆಯೊಂದರಲ್ಲಿ, ಸೆಪ್ಟೆಂಬರ್ 6 ರ ಭಾನುವಾರದಂದು ಕಿನ್ನಿಗೋಳಿ ಬಳಿಯ ಕರ್ನಿರೆಯಲ್ಲಿ ಈಜುತ್ತಿರುವಾಗ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಬೆಂಗಳೂರು ನಿವಾಸಿ ಅನಿಲ್ (32) ಎಂದು ಗುರುತಿಸಲಾಗಿದೆ.
ಅನಿಲ್ ಸೇರಿದಂತೆ ಏಳು ಜನರ ಗುಂಪು ಕರಾವಳಿಯನ್ನು ಸುತ್ತಾಡಲು ಬೆಂಗಳೂರಿನಿಂದ ಬಂದಿದ್ದರು. ಭಾನುವಾರ ಅವರು ಕರ್ನಿರೆಯ ಶಂಭವಿ ನದಿಗೆ ಹೋಗಿದ್ದರು.
ಏಳರಲ್ಲಿ ಮೂವರು ಈಜಲು ನೀರಿಗಿಳಿದಿದ್ದರು. ಆದರೆ, ಬಲವಾದ ಗಾಳಿ ಬೀಸಿದ್ದರಿಂದ ಅವರು ಆಯ ತಪ್ಪಿರಬಹುದು ಎನ್ನಲಾಗಿದೆ.
ಸುತ್ತಮುತ್ತಲಿನ ಸ್ಥಳೀಯರು ಕೂಡಲೆ ಅವರ ರಕ್ಷಣೆಗೆ ಧಾವಿಸಿದ್ದರಿಂದ, ಮೂವರಲ್ಲಿ ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು. ಆದರೆ, ದುರದೃಷ್ಟವಶಾತ್ ಅನಿಲ್ ಅವರ ಜೀವ ಉಳಿಸಲಾಗಲಿಲ್ಲ.
ಮುಲ್ಕಿ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿದ್ದಾರೆ