ತೋಕೂರು: ಕೃಷಿಕರ ಅನುಕೂಲಕ್ಕಾಗಿ ಅಡ್ಡ ಹಲಗೆಗಳನ್ನು ಹಾಕಿ ನೀರು ಇಂಗಿಸುವ ಕಾರ್ಯ

0
228
Tap to know MORE!

ತೋಕೂರು ಡಿ.27: ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು, ಇದರ ಆಶ್ರಯದಲ್ಲಿ ಆದಿತ್ಯವಾರ ತೋಕೂರು ಚಿಕ್ಕಟ್ರಾಯಪಾಡಿ ನಾರಾಯಣ. ವಿ. ಕೋಟ್ಯಾನ್ ಇವರ ಸ್ಥಳದ ರಾಜ ಕಾಲುವೆಯ ಬಳಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟುವಿಗೆ ಕೃಷಿಕರ ಅನುಕೂಲಕ್ಕಾಗಿ ನೀರು ಉಳಿಸುವ ಉದ್ದೇಶದಿಂದ ಅಡ್ಡ ಹಲಗೆಗಳನ್ನು ಹಾಕಿ ನೀರು ಇಂಗಿಸುವ ಕಾರ್ಯದಲ್ಲಿ ಸಂಸ್ಥೆಯ ಸದಸ್ಯರು ಶ್ರಮದಾನ ಮಾಡಿದರು.

ಇದನ್ನೂ ಓದಿ: ತೋಕೂರು: ಶ್ರೀ ಸುಬ್ರಹ್ಮಣ್ಯ ಸಭಾಭವನದ ಭೋಜನ ಶಾಲೆ ಸಮರ್ಪಣೆ| ದಾನಿಗಳಿಗೆ ಸನ್ಮಾನ

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂತೋಷ್ ದೇವಾಡಿಗ, ಉಪಾಧ್ಯಕ್ಷರು ಶ್ರೀ ದೀಪಕ್ ಸುವರ್ಣ, ಕಾರ್ಯಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ, ಕೋಶಾಧಿಕಾರಿ ಶ್ರೀ ಸಂಪತ್ ದೇವಾಡಿಗ, ಪರಿಸರ ಸಂರಕ್ಷಣಾ ಕಾರ್ಯದರ್ಶಿ ಶ್ರೀ ಸುನಿಲ್ ದೇವಾಡಿಗ, ಆಂತರಿಕ ಲೆಕ್ಕ ಪರಿಶೋಧಕರು ಶ್ರೀ ಸುಭಾಸ್, ಸಂಸ್ಥೆಯ ಸದಸ್ಯರು ಹಾಗೂ ನಿವೃತ್ತ ಯೋಧರು ಶ್ರೀ ವಿಜಯ್ ಕುಮಾರ್, ಸದಸ್ಯರಾದ ಶ್ರೀ ಮಹೇಶ್ ಬೆಲ್ಚಡ್, ಶ್ರೀ ಸಂತೋಷ್ ದೇವಾಡಿಗ, ಹಾಗೂ ಮಾ|ಶ್ರೇಯಸ್ ದೇವಾಡಿಗ, ಮಾ|ರಿಷಾಂಕ್, ಮಾ|ಪ್ರಥಮ್ ಈ ಶ್ರಮದಾನದಲ್ಲಿ ಭಾಗವಹಿಸಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಶುದ್ಧ ಪರಿಸರ ಮತ್ತು ಆರೋಗ್ಯಯುತ ಸಮಾಜ ಕಟ್ಟಲು ಎಲ್ಲರ ಸಹಕಾರ ಅಗತ್ಯ : ಶ್ರೀ ಚಂದ್ರಶೇಖರ್ ದೇವಾಡಿಗ

LEAVE A REPLY

Please enter your comment!
Please enter your name here