ನೆನಪಿನ ಛಾಯೆಗೆ ಜೀವ ನೀಡುವ ಛಾಯಾಚಿತ್ರ.!

0
244
Tap to know MORE!

ನೆನಪಿನ ಕೈಗನ್ನಡಿಯು ಮನದಂತರಾಳದ ಹಿಡಿ ನೆನಪನ್ನು ಪುನಃ ಮೇಲೆತ್ತಿ ಆ ಕ್ಷಣದಲ್ಲಿ ಕಳೆದ ದಿನ ಪಡೆದ ಸಂತಸದ ನೆನಪಿನ ನದಿಯೇ ತನುವಿನೊಳಗೆ ಹರಿಯುವಂತೆ ಮಾಡುತ್ತದೆ.

ಹಿಂದಿನ ಕಾಲದಲ್ಲಿ ಬರವಣಿಗೆ ನೆನಪಿನ ಬುಟ್ಟಿಯಾಗಿರುತ್ತಿತ್ತು. ಆದರೆ ಕಾಲ ಬದಲಾಗಿದೆ. ತಾಂತ್ರಿಕತೆ ಮುಂದುವರಿದು ನೆನಪಿನ ಜೋಳಿಗೆ ಸಿಕ್ಕಿಸಿಡಲು ಫೋಟೋ ಬಂದಿದೆ. ಒಂದು ಫೋಟೋ ಕ್ಲಿಕ್ಕಿಸಿ ಬಿಡುತ್ತೇವೆ. ಆ ಫೋಟೋ ಸ್ವಲ್ಪ ವರುಷ ಅಥವಾ ದೀರ್ಘಕಾಲದ ಬಳಿಕ ಅದನ್ನು ಮರಳಿ ನೋಡುವಾಗ ಕಳೆದ ಸಮಯ ಮರಳಿ ಬರದಿದ್ದರೂ ಹಳೆ ನೆನಪು ಮರಳಿ ಚಿಗುರೊಡೆಯುವಂತೆ ಮೂಡುತ್ತದೆ. ಅಂದಿನ ಸ್ನೇಹ, ಒಡನಾಟ, ಸುಖ-ದುಃಖ ಎಲ್ಲಾ ಕಣ್ಣೆದುರು ಮಿಂಚಿನಂತೆ ಹಾದುಹೋಗುತ್ತದೆ.

ಛಾಯಾಚಿತ್ರ ನಮ್ಮಿಂದ ದೂರವಾದ ಮನಸ್ಸುಗಳು, ಸಿಹಿ ಕಹಿ ಘಟನೆಗಳನ್ನು ಮರಳಿ ನೆನೆಯುವಂತೆ ಮಾಡುತ್ತದೆ. ನನ್ನ ಬಾಲ್ಯದಲ್ಲಿ ತೆಗೆದ ಚಿತ್ರ ನನ್ನ ಬಾಲ್ಯದ ದಿನಗಳ ಮೋಜು-ಮಸ್ತಿ ತುಂಟಾಟದ ರಸದೌತಣವನ್ನು ನೆನಪಿಸುತ್ತದೆ. ಶಾಲಾ ದಿನದ ನನ್ನ ಫೋಟೋ ಆ ದಿನಗಳಲ್ಲಿ ಅನುಭವಿಸಿದ ಖುಷಿ, ಅಧ್ಯಾಪಕರ ಪೆಟ್ಟು, ಅವರ ಬುದ್ಧಿ ಮಾತು, ಅಂದಿನ ನನ್ನ ಸಹಪಾಠಿಗಳೊಂದಿಗಿನ ಬಾಂಧವ್ಯವನ್ನು ನೆನಪಿಸುತ್ತದೆ.

ನಾನು ನಡೆದ ಹಾದಿ ನೆನಪಿನ ಛಾಯೆಯಂತಿದೆ. ಆದರೆ ಛಾಯಾಚಿತ್ರವನ್ನು ನೋಡಿದರೆ ಆ ದಿನಗಳು ಜೀವಂತವಾಗುತ್ತವೆ, ಕಣ್ಣಮುಂದೆ ಬರುತ್ತವೆ. ಆ ಗಳಿಗೆ ಹಣ ಕೊಟ್ಟರೂ ಬಾರದು. ಆ ಕ್ಷಣವನ್ನು ಮರಳಿ ನೆನಪಿಸುವ ಈ ಛಾಯಾಚಿತ್ರಗಳಿಗೆ ನನ್ನ ಮನದಿಂದ ಧನ್ಯತೆಯ ನಮನ.

ಗಿರೀಶ್ ಪಿಎಂ
ಪ್ರಥಮ ಬಿಎ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here