ನೇತ್ರಾವತಿ ನದಿಯಲ್ಲಿ ಹರಿವು ಹೆಚ್ಚಳ

0
128
Tap to know MORE!

ಬಂಟ್ವಾಳ : ಕರಾವಳಿ ಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿರುವ ಜತೆಗೆ ಘಟ್ಟ ಭಾಗದಲ್ಲಿ ಹೆಚ್ಚಿನ ಮಳೆಯಾದ ಹಿನ್ನಲೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಬಂಟ್ವಾಳದಲ್ಲಿ ರವಿವಾರ ನೀರಿನ ಮಟ್ಟ 5.1ಮೀ ಇತ್ತು. ಎರಡು ದಿನಗಳ ಹಿಂದೆ ಕ್ರಮವಾಗಿ 4.5 ಹಾಗೂ 4.9ಮೀ ಇತ್ತು. ಜೂನ್ 11 ರಂದು 5.5ಮೀ ನೀರಿನ ಮಟ್ಟ ಇದ್ದ ನದಿಯಲ್ಲಿ ಬಳಿಕ ಇಳಿಕೆಯಾಗಿತ್ತು. ರವಿವಾರ ಮತ್ತೆ ಹೆಚ್ಚಾಗಿದೆ.

ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ತುಂಬೆ ಡ್ಯಾಮ್ ನಲ್ಲಿ ಪ್ರಸ್ತುತ 5.5ಮೀ ನೀರು ನಿಲ್ಲಿಸಲಾಗುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದಂತೆ ಗೇಟ್ಗಳನ್ನು ತೆರೆದು ಹೊರಬಿಡಲಾಗುತ್ತಿದೆ. ಬಂಟ್ವಾಳದಲ್ಲಿ ನೇತ್ರಾವತಿಯ ನೀರಿನ ಮಟ್ಟ 8.5ಮೀ ದಾಟಿದರೆ ಅಪಾಯವಿದ್ದು, ಆ ಸಂದರ್ಭದಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗುವ ಸಂಭವವಿದೆ. ಹೀಗಾಗಿ ನೀರಿನ ಮಟ್ಟ ಹೆಚ್ಚಾದಂತೆ ಪ್ರವಾಹದ ಭೀತಿಯು ಎದುರಾಗುವ ಎಚ್ಚರಿಕೆ ಅಗತ್ಯವಿದೆ

LEAVE A REPLY

Please enter your comment!
Please enter your name here