ನೋಬೆಲ್ ಶಾಂತಿ ಪುರಸ್ಕಾರಕ್ಕೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸು!

0
210
Tap to know MORE!

ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವೆ ಶಾಂತಿ ಒಪ್ಪಂದ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 2021 ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿದೆ.

ಅವರನ್ನು ನಾರ್ವೇ ಸಂಸತ್ತಿನ ಸದಸ್ಯ ಕ್ರಿಶ್ಚಿಯನ್ ಟೈಬ್ರಿಂಗ್-ಗೆಜೆಡೆ ನಾಮನಿರ್ದೇಶನ ಮಾಡಿದರು. ವಿಶ್ವದಾದ್ಯಂತ ಸಂಘರ್ಷಗಳನ್ನು ಪರಿಹರಿಸುವಲ್ಲಿ ಟ್ರಂಪ್ ಮಾಡಿದ ಪ್ರಯತ್ನವನ್ನು ಅವರು ಶ್ಲಾಘಿಸಿದರು.

“ಅವರು ಶಾಂತಿ ಪ್ರಶಸ್ತಿ ನಾಮನಿರ್ದೇಶಿತರಿಗಿಂತ ಹೆಚ್ಚಿನ ರಾಷ್ಟ್ರಗಳ ನಡುವೆ ಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಟೈಬ್ರಿಂಗ್-ಗೆಜೆಡೆ ತಿಳಿಸಿದರು.

ನ್ಯಾಟೋ ಪಾರ್ಲಿಮೆಂಟರಿ ಅಸೆಂಬ್ಲಿಗೆ ನಾರ್ವೇಜಿಯನ್ ನಿಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ನಾಲ್ಕು ಬಾರಿ ಸಂಸತ್ತಿನ ಸದಸ್ಯರಾಗಿರುವ ಟೈಬ್ರಿಂಗ್-ಗೆಜೆಡೆ, ಯುಎಇ ಮತ್ತು ಇಸ್ರೇಲ್ ನಡುವಿನ ಸಂಬಂಧಗಳ ಸ್ಥಾಪನೆಯಲ್ಲಿ ಟ್ರಂಪ್ ಆಡಳಿತವು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here