ಪಂಜಾಬ್ ರಾಜ್ಯದ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ವಿನಿ ಮಹಾಜನ್ ಆಯ್ಕೆ

0
136
Tap to know MORE!

1987 ರ ಭಾರತೀಯ ಆಡಳಿತ ಸೇವೆ (ಐಎಎಸ್) ಬ್ಯಾಚ್ ಅಧಿಕಾರಿ ವಿನಿ ಮಹಾಜನ್ ಅವರು ಜೂನ್ 26, 2020 ರಂದು ಪಂಜಾಬ್‌ನ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರು. ಇದರೊಂದಿಗೆ ಅವರು ಪಂಜಾಬ್‌ನಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಆಡಳಿತ ಸುಧಾರಣೆಗಳ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಇವರ ಮೊದಲು, ಕರಣ್ ಅವತಾರ್ ಸಿಂಗ್ ಅವರು ಈ ಸ್ಥಾನದಲ್ಲಿದ್ದರು.

ವಿನಿ ಮಹಾಜನ್ ಅವರು ಪಂಜಾಬ್ ರಾಜ್ಯದಲ್ಲಿ ಜಿಲ್ಲಾಧಿಕಾರಿ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳಾ ಅಧಿಕಾರಿಯೂ ಆಗಿದ್ದರು. ಅವರು 1995 ರಲ್ಲಿ ರೋಪರ್ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದ್ದರು.

ವೃತ್ತಿ ಜೀವನ
ನವದೆಹಲಿಯ ಮಾಡರ್ನ್ ಶಾಲೆಯಿಂದ 12 ನೇ ತರಗತಿ ತೇರ್ಗಡೆಯಾದ ಬಳಿಕ, ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಮುಗಿಸಿದರು. ಬಳಿಕ ಅವರು ಕಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ ಕಲ್ಕತ್ತಾ) ದಿಂದ ಸ್ನಾತಕೋತ್ತರ ಪದವಿ ಪಡೆದರು.

ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಸ್ಕಾಲರ್‌ಶಿಪ್, ಐಐಎಂ ಕಲ್ಕತ್ತಾದ ರೋಲ್ ಆಫ್ ಆನರ್ ಮುಂತಾದವುಗಳನ್ನು ಒಳಗೊಂಡಂತೆ, ಆಕೆಯ ಹೆಸರಿನಲ್ಲಿ ಹಲವಾರು ಶೈಕ್ಷಣಿಕ ಸಾಧನೆಗಳೂ ಇವೆ.

ಮಹಾಮಾರಿ ಕೊವಿಡ್-19 ಸಾಂಕ್ರಾಮಿಕ ರೋಗಕ್ಕೆ ಪಂಜಾಬ್ ರಾಜ್ಯ , ಸರ್ಕಾರದ ಆರೋಗ್ಯ ವಲಯದ ಪ್ರತಿಕ್ರಿಯೆ ಮತ್ತು ಖರೀದಿ ಸಮಿತಿಯ ಅಧ್ಯಕ್ಷರಾಗಿ ವಿವಿಧ ಉಪಕ್ರಮಗಳನ್ನು ನಡೆಸುವ ಮೂಲಕ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಅವರು 2004-05ರಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ನಿರ್ದೇಶಕರ ಹುದ್ದೆಯನ್ನು ಅಲಂಕರಿಸಿದ್ದರು.

LEAVE A REPLY

Please enter your comment!
Please enter your name here