ಪಂಜ: ಸೇವಾ ಭಾರತ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸಮ್ಮಾನ ಸಮಾರಂಭ

0
1552
Tap to know MORE!

ತೋಕೂರು: ಸಮಾಜದ ಹಿತಕ್ಕೋಸ್ಕರ ತಮ್ಮ ಸ್ವಂತ ಸುಖವನ್ನು ಬಲಿಗೊಟ್ಟು ಕೊರೊನ ವಾರಿಯರ್ಸ್ ಆಗಿ ಕಾರ್ಯವೆಸಗುತ್ತಿರುವ ವೈದ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರ ಸೇವೆ ಅಭಿನಂದನೀಯ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.

ಸೇವಾ ಭಾರತ್ ಪಂಜ ಕೊಯಿಕುಡೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್ ಇದರ ಆರೋಗ್ಯಾಧಿಕಾರಿ ಡಾ. ಚಿತ್ರ ಹಾಗೂ ಕೆಮ್ರಾಲ್ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನಡೆದ ಗೌರವಾರ್ಪಣೆ, ಸಮ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ ಚಿತ್ರ ರವರು, ಕೊರೊನ ವಿರುದ್ಧ ಹೋರಾಡುವ ನಮ್ಮ ಕಾರ್ಯಕ್ಕೆ ಇನ್ನಷ್ಟು ಸ್ಫೂರ್ತಿ ನೀಡಿದೆ ಎಂದರು.
ಸಮಾರಂಭದಲ್ಲಿ ಪಂಜ ವಾಸುದೇವ ಭಟ್ಟರು, ಆಶೀರ್ವಚನ ನೀಡಿದರು.

ನೀರುಮಾರ್ಗ: ಓಂ ಶಕ್ತಿ ಫ್ರೆಂಡ್ಸ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ವೇದಿಕೆಯಲ್ಲಿ ನವಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಶೀಮತಿ ಅಮಿತ ದೇವಾಡಿಗ, ಸಚಿನ್ ಶೆಟ್ಟಿ ಅತ್ತೂರು, ಸೇವಾಭಾರತ್ ನ ಪ್ರಮುಖ ರಾಜೇಶ್ ಶೆಟ್ಟಿ ಮಾಜಲಾಗುತ್ತು , ಉಪಸ್ಥಿತರಿದ್ದರು.

ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಪ್ರಮೀಳಾ ದೇವಾಡಿಗ ಪಂಜ, ಶ್ರೀಮತಿ ವಿದ್ಯಾ ಕೊಯಿಕುಡೆ, ಶ್ರೀಮತಿ ಶೋಭಾ ಕೆಮ್ರಾಲ್, ಶ್ರೀಮತಿ ವೀಣಾ ಅತ್ತೂರು, ಶ್ರೀಮತಿ ಹೇಮಾ ಹೊಸಕಾಡು, ಇವರನ್ನು ಸಮ್ಮಾನಿಸಲಾಯಿತು.

ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು, ಸುನಿಲ್ ಪಂಜ ವಂದಿಸಿದರು, ಉಮೇಶ್ ಪಂಜ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here