ಪಂಜ : ಭಾಜಪಾ ಬೂತ್ ಸಮಿತಿ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮ

0
164
Tap to know MORE!

ಭಾಜಪಾ ಕೆಮ್ರಾಲ್ ಶಕ್ತಿ ಕೇಂದ್ರದ ಪಂಜ ಬೂತ್ ಸಮಿತಿ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಾಣಿ  ಮತ್ತು ವಿತರಣೆ ಕಾರ್ಯಕ್ರಮ ನಡೆಯಿತು. ಸುಮಾರು ಮುನ್ನೂರಕ್ಕೂ ಹೆಚ್ಚು ಕುಟುಂಬ ಸದಸ್ಯರಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.

ಈ ಕಾರ್ಯಕ್ರಮ ಆಯೋಜನೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಹಾಗೂ ಭಾಜಪಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕಸ್ತೂರಿ ಪಂಜ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಈಶ್ವರ್ ಕಟೀಲ್, ಕೆಮ್ರಾಲ್ ಶಕ್ತಿಕೇಂದ್ರದ ಚುನಾವಣಾ ಪ್ರಭಾರಿ ಹಾಗೂ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಅಭಿಲಾಷ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ವಜ್ರಾಕ್ಷಿ ಶೆಟ್ಟಿ, ಕಟೀಲು ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಅಮರ್ ಶೆಟ್ಟಿ ಪಕ್ಷಿಕೆರೆ ವಿಶೇಷ ಮುತುವರ್ಜಿ ವಹಿಸಿದರು.

ಇವರುಗಳ ಜೊತೆ ಕಾರ್ಯಕ್ರಮದಲ್ಲಿ ಕಟೀಲು ಮಹಾಶಕ್ತಿ ಕೇಂದ್ರ ಮಹಿಳಾ ಪ್ರಮುಖ್ ರೇಖಾ ಚೇಳಾರು, ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧನುಷ್ ಕುಲಾಲ್, ಕೆಮ್ರಾಲ್ ಶಕ್ತಿಕೇಂದ್ರ ಪ್ರಮುಖರಾದ ದಯಾನಂದ್ ಶೆಟ್ಟಿ, ಸೀತಾರಾಮ ಪಂಜ,ಪಂಜ ಬೂತ್ ಸಮಿತಿ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ,ಕಾರ್ಯದರ್ಶಿ ರಂಜಿತ್ ಮೊಗಪಾಡಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here