ಪಂಜ: ಜ.18 ರಂದು ಶ್ರೀ ವಿಠೋಬ ಭಜನಾ ಮಂದಿರದ ನೂತನ ಕಟ್ಟಡ ಉದ್ಘಾಟನೆ

0
207
Tap to know MORE!

ಪಕ್ಷಿಕೆರೆ ಜ.9: ಪಂಜ ಗ್ರಾಮದ ಶ್ರೀ ವಿಠೋಬ ದೇವರ ನೂತನ ಭಜನಾ ಮಂದಿರದ ಉದ್ಘಾಟನಾ ಸಮಾರಂಭವು ಜನವರಿ 18ರ ಸೋಮವಾರ ಬೆಳಿಗ್ಗೆ ಘಂಟೆ 8.55ಕ್ಕೆ
ಮಕರ ಲಗ್ನ ಸುಮುಹೂರ್ತದಲ್ಲಿ ನಡೆಯಲಿದೆ ಎಂದು ಮಂದಿರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಂಜ ಮಹಾಗಣಪತಿ ಮಂದಿರದ ಸುರೇಶ್ ಭಟ್ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಂದಿರದ ಪ್ರವೇಶವು ಜರುಗಲಿದೆ.

ಇದನ್ನೂ ಓದಿ: ಪಂಜ : ಭಾಜಪಾ ಬೂತ್ ಸಮಿತಿ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಜನವರಿ 17ರ ಭಾನುವಾರ ಸಂಜೆ 5 ಗಂಟೆಗೆ ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ ಹಾಗೂ ಜನವರಿ 18ರ ಸೋಮವಾರ ಬೆಳಿಗ್ಗೆ ಪುಣ್ಯಾರ್ಚನೆ, ತುಳಸಿ ಪ್ರತಿಷ್ಠೆ, ದ್ವಾರ ಪೂಜೆ, ಬೆಳಿಗ್ಗೆ 10 ಗಂಟೆಗೆ ದುರ್ಗಾ ಹೋಮ ಪೂರ್ಣಾಹುತಿ, ಬೆಳಿಗ್ಗೆ 10.30 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ಭಜನೆ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here