ಕೋವಿಡ್ ‘POSITIVE’| ಪಂಜ: ಕೊರೋನಾ ಗೆದ್ದ ಕೂಡು ಕುಟುಂಬ | ಗ್ರಾಮಸ್ಥರಿಂದ ಅಭಿನಂದನೆ

0
188
Tap to know MORE!

ಪಕ್ಷಿಕೆರೆ: ಪಂಜದ 13 ಸದಸ್ಯರಿರುವ ಒಂದು ಮನೆಯ ಒಬ್ಬ ಸದಸ್ಯರು ಅಸೌಖ್ಯದಿಂದಾಗಿ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪೊಸಿಟಿವ್ ಆಗಿದ್ದು , ಮುಂಜಾಗ್ರತಾ ಕ್ರಮವಾಗಿ ಉಳಿದ 12 ಸದಸ್ಯರನ್ನು ಕೊರೊನ ಪರೀಕ್ಷೆಗೊಳಪಡಿಸಿದಾಗ 5 ಸದಸ್ಯರು ಪೊಸಿಟಿವ್ ಆಗಿದ್ದು . ಕೆಮ್ರಾಲ್ ಆರೋಗ್ಯ ಕೇಂದ್ರದ ವೈದ್ಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರ ಮೇಲ್ವಿಚಾರಣೆಯಲ್ಲಿ ಪೊಸಿಟಿವ್ ಆದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಯಿತು. ಬಾಕಿ 7 ಸದಸ್ಯರಿಗೆ ಪಂಜ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಯಿತು.

ಕೋವಿಡ್ ‘POSITIVE’: ಕುಂದಾಪುರದ ಒಂದೇ ಮನೆಯ 19 ಸೋಂಕಿತರು ಗುಣಮುಖ!

ಕೋವಿಡ್ ‘POSITIVE’: 10 ದಿನ ವೆಂಟಿಲೇಟರ್ ಸಹಾಯದಲ್ಲಿದ್ದರೂ ಕೊರೋನಾ ಗೆದ್ದ 1 ತಿಂಗಳ ಹೆಣ್ಣುಮಗು!

ಸೇವಾಭಾರತ್ ಪಂಜ ಕೊಯಿಕುಡೆ ಸಂಸ್ಥೆಯ ಸದಸ್ಯರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ , ಕೊರೊನ ಜಾಗ್ರತಿ ತಂಡದ ಮಾರ್ಗದರ್ಶನದೊಂದಿಗೆ , ಕೊರೊನ ಬಾಧಿತರಿಗೆ ಭರವಸೆಯ ಧೈರ್ಯ ತುಂಬುವ ಕಾರ್ಯದೊಂದಿಗೆ, ಮಾನಸಿಕ ವೈದ್ಯರಿಂದ ಕೌನ್ಸಿಲಿಂಗ್ ವ್ಯವಸ್ಥೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರ ವಿನಂತಿಯಂತೆ ಆರೋಗ್ಯ ಕಿಟ್ , ಪಲ್ಸ್ ಮೀಟರ್, ನೀಡಲಾಗಿದೆ, ಇನ್ನಿತರ ವ್ಯವಸ್ಥೆ ನೀಡಲಾಗಿದೆ.
ಗ್ರಾಮಸ್ಥರ ಸಹಕಾರದೊಂದಿಗೆ , ಸೇವಾಭಾರತ್ ತಂಡದ ಸದಸ್ಯರು ಪ್ರತಿ ನಿತ್ಯ ಊಟ, ಉಪಹಾರದ ವ್ಯವಸ್ಥೆಯನ್ನು ದಿನಕ್ಕೊಂದು ಮನೆಯವರಂತೆ ನೀಡಿ ತಮ್ಮ ಹೃದಯವಂತಿಕೆಯನ್ನು ಮೆರೆದಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಖ್ಯಾತ ಮಾನಸಿಕ ತಜ್ಞ ಡಾ. ಸತೀಶ್ ರಾವ್, ಕೆಮ್ರಾಲ್ ಆರೋಗ್ಯ ಕೇಂದ್ರದ ವೈದ್ಯೆ ಡಾ. ಚಿತ್ರ , ಶಾಶಕರಾದ ಉಮಾನಾಥ ಕೋಟ್ಯಾನ್, ಜಿ ಪ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಸಹಕರಿಸಿದರು.

LEAVE A REPLY

Please enter your comment!
Please enter your name here