ಪಕ್ಷದ ನೂತನ ಪದಾಧಿಕಾರಿಗಳನ್ನ ನೇಮಕ ಮಾಡಿದ ಬಿಜೆಪಿ

0
183
Tap to know MORE!

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ರಾಜ್ಯ ಪದಾಧಿಕಾರಿಗಳು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಕಾರ್ಯದರ್ಶಿಗಳು, ರಾಜ್ಯ ಖಜಾಂಚಿಗಳು, ರಾಜ್ಯ ಕಾರ್ಯಾಲಯದ ಕಾರ್ಯದರ್ಶಿ, ರಾಜ್ಯ ವಕ್ತಾರರು, ಪ್ರಕೋಷ್ಠಗಳ ಸಂಯೋಜಕರು ಸೇರಿದಂತೆ ರಾಜ್ಯ ಬಿಜೆಪಿ ಘಟಕದ ವಿವಿಧ ವಿಭಾಗಗಳಿಗೆ ನೂತನ ಸದಸ್ಯರನ್ನ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷರ ಪಟ್ಟಿ :

1. ಅರವಿಂದ ಲಿಂಬಾವಳಿ
2. ನಿರ್ಮಲ್‌ಕುಮಾರ್ ಸುರಾನಾ
3. ಶೋಭಾ ಕರಂದ್ಲಾಜೆ
4. ತೇಜಸ್ವಿನಿ ಅನಂತ್‌ಕುಮಾರ್
5. ಪ್ರತಾಪ್ ಸಿಂಹ
6. ಎಂ.ಬಿ.ನಂದೀಶ್
7. ಮಾಲೀಕಯ್ಯ ಗುತ್ತೇದಾರ್
8. ಬಿ.ವೈ.ವಿಜಯೇಂದ್ರ
9. ಎಂ.ಶಂಕರಪ್ಪ
10. ಎಂ.ರಾಜೇಂದ್ರ

ರಾಜ್ಯ ಪ್ರಧಾನ ಕಾರ್ಯದರ್ಶಿಗಳು

1. ಎನ್‌.ರವಿಕುಮಾರ್ – ದಾವಣಗೆರೆ
2. ಸಿದ್ದರಾಜು- ಮೈಸೂರು ಗ್ರಾಮಾಂತರ
3. ಅಶ್ವತ್‌ನಾರಾಯಣ್‌- ಬೆಂಗಳೂರು ಕೇಂದ್ರ
4. ಮಹೇಶ್ ಟೆಂಗಿನಕಾಯಿ – ಹುಬ್ಬಳ್ಳಿ-ಧಾರವಾಡ ಮಹಾನಗರ

ಮೋರ್ಚಾ ರಾಜ್ಯ ಅಧ್ಯಕ್ಷರು

ಬಿಜೆಪಿ ಯುವ ಮೋರ್ಚಾ- ಡಾ.ಸಂದೀಪ್
ಮಹಿಳಾ ಮೋರ್ಚಾ – ಗೀತಾ ವಿವೇಕಾನಂದ
ರೈತ ಮೋರ್ಚಾ – ಈರಣ್ಣ ಕಡಾಡಿ
ಹಿಂದುಳಿದ ವರ್ಗಗಳ ಮೋರ್ಚಾ -ಅಶೋಕ್ ಗಸ್ತಿ
ಎಸ್.ಸಿ‌.ಮೋರ್ಚಾ- ಚಲುವಾದಿ ನಾರಾಯಣಸ್ವಾಮಿ
ಎಸ್.ಟಿ.ಮೋರ್ಚಾ – ತಿಪ್ಪರಾಜು ಹವಾಲ್ದಾರ್
ಅಲ್ಪಸಂಖ್ಯಾತ ಮೋರ್ಚಾ -ಮುಜಾಮಿಲ್ ಬಾಬು

ಬಿಜೆಪಿ ರಾಜ್ಯ ವಕ್ತಾರರಾಗಿ ಕ್ಯಾ.ಗಣೇಶ್ ಕಾರ್ಣಿಕ್ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ಯುವ ಮೋರ್ಚಾ ಗಾದಿಗೆ ಡಾ.ಸಂದೀಪ್ ಅವರನ್ನು ನೇಮಕ ಮಾಡಲಾಗಿದೆ.

ನೂತನ ಇಬ್ಬರು ರಾಜ್ಯಸಭಾ ಸದಸ್ಯರಿಗೂ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದ್ದು ರೈತ ಮೋರ್ಚಾದ ಅಧ್ಯಕ್ಷರಾಗಿ ಈರಣ್ಣ ಕಡಾಡಿ, ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಅಶೋಕ್ ಗಸ್ತಿಗೆ ಅವಕಾಶ ನೀಡಲಾಗಿದೆ.

(ಪಬ್ಲಿಕ್ ನೆಕ್ಸ್ಟ್ ವರದಿ)

LEAVE A REPLY

Please enter your comment!
Please enter your name here