ಪಕ್ಷಿಕೆರೆ: ಶ್ರೀ ವಿನಾಯಕ ಮಿತ್ರ ಮಂಡಳಿ(ರಿ) ಪಕ್ಷಿಕೆರೆ, ಇದರ ನೇತೃತ್ವದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ದ.ಕ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ಉಕ್ಕಿನ ಮನುಷ್ಯ ಶ್ರೀ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನಾಚರಣೆ ಪ್ರಯುಕ್ತ “ರಾಷ್ಟ್ರೀಯ ಏಕತಾ ದಿವಸ್” ಕಾರ್ಯಕ್ರಮವನ್ನು ಪಕ್ಷಿಕೆರೆ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಶ್ರೀ ರಘುವೀರ್ ಸೂಟರ್ಪೇಟೆ ಮಾತನಾಡಿ, ರಾಷ್ಟ್ರೀಯ ಏಕತಾ ದಿವಸದ ಮಹತ್ವವನ್ನು ವಿಸ್ತೃತವಾಗಿ ವಿವರಿಸಿದರು. ತಾಲೂಕು ಪ್ರತಿನಿಧಿ ಶ್ರೀ ಪ್ರಿತೇಶ್, ಪಂಚಾಯತ್ ಕಾರ್ಯದರ್ಶಿಯಾದ ಶ್ರೀ ಕೇಶವ್, ಶ್ರೀ ಕೋರ್ದಬ್ಬು ದೈವಸ್ಥಾನ ಸೇವಾಸಮಿತಿ ಅಧ್ಯಕ್ಷರಾದ ಶ್ರೀ ಶ್ರೀಧರ್, ಮಂಡಳಿಯ ಸದಸ್ಯರು, ಸ್ಥಳೀಯ ನಾಗರಿಕರು ಭಾಗವಹಿಸಿದರು.
ಇದನ್ನೂ ಓದಿ: ಪಕ್ಷಿಕೆರೆ : ಸ್ವಚ್ಛತೆಯ ಜನಜಾಗೃತಿಗಾಗಿ ಬೈಕ್ ರ್ಯಾಲಿ
ಮಂಡಳಿಯ ಗೌರವಾಧ್ಯಕ್ಷರಾದ ಶ್ರೀ ಧನಂಜಯ ಪಿ ಶೆಟ್ಟಿಗಾರ್ ಪ್ರಸ್ತಾವನೆ ಮೂಲಕ ಸ್ವಾಗತಿಸಿದರು, ಅಧ್ಯಕ್ಷರಾದ ಶ್ರೀ ಯಜ್ಞೇಶ್ ಶೆಟ್ಟಿಗಾರ್ ಧನ್ಯವಾದ ಸಮರ್ಪಿಸಿದರು, ಕಾರ್ಯದರ್ಶಿಯಾದ ಶ್ರೀ ಧನರಾಜ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.