ಪತಂಜಲಿಯ ಉದ್ದೇಶಿತ ಕೊರೋನಾ ಔಷಧದ ಮಾರಾಟ ಮತ್ತು ಅದರ ಜಾಹೀರಾತು ನೀಡುವುದನ್ನು ನಿಲ್ಲಿಸಿದ ಆಯುಷ್ ಸಚಿವಾಲಯ

0
184
Tap to know MORE!

ಕೋವಿಡ್ -19 ಗಾಗಿ ಯೋಗ ಗುರು ರಾಮದೇವ್ ಅವರು “ಔಷಧಿ” ಯೊಂದಿನ್ನು ಪರಿಚಯಿಸಿದ ಕೆಲವೇ ಗಂಟೆಗಳ ನಂತರ, ಇದನ್ನು “ಸರಿಯಾಗಿ ಪರಿಶೀಲಿಸುವವರೆಗೂ ಜಾಹೀರಾತು ನೀಡುವುದು ಅಥವಾ ಅದರ ಹಕ್ಕುಗಳನ್ನು ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಕೇಂದ್ರವು ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಕೇಳಿದೆ.

ಮಾಧ್ಯಮ ವರದಿಗಳನ್ನು ಅರಿತುಕೊಂಡ ಆಯುಷ್ ಸಚಿವಾಲಯವು “ಹೇಳಿಕೆಯ ಸತ್ಯಗಳು ಮತ್ತು ಹೇಳಲಾದ ವೈಜ್ಞಾನಿಕ ಅಧ್ಯಯನದ ವಿವರಗಳು ಸಚಿವಾಲಯಕ್ಕೆ ತಿಳಿದಿಲ್ಲ ಹಾಗೂ ಪತಂಜಲಿಯು ನಮಗೆ ಇದರ ಕುರಿತು ವಿವರಿಸಿಲ್ಲ” ಎಂದು ಹೇಳಿತು.

ಆಯುರ್ವೇದ ಔಷಧಿಗಳನ್ನು ಒಳಗೊಂಡಂತೆ ಯಾವುದೇ ಔಷಧಿಗಳ ಜಾಹೀರಾತುಗಳನ್ನು ಮತ್ತು ಇನ್ಯಾವುದೋ ಪರಿಹಾರ ವಿಧಾನಗಳನ್ನು (ಆಕ್ಷೇಪಾರ್ಹ ಜಾಹೀರಾತುಗಳು) 1954ರ ಕಾಯ್ದೆಯಡಿ ಮತ್ತು ಕೇಂದ್ರ ಸರ್ಕಾರವು ಹೊರಡಿಸಿದ ನಿರ್ದೇಶನಗಳ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ ಎಂದು ಸರ್ಕಾರ ಪತಂಜಲಿಗೆ ತಿಳಿಸಿದೆ ಎಂದು ಆಯುಶ್ ಸಚಿವಾಲಯವು ಹೇಳಿದೆ

ಇಂದು ಮಧ್ಯಾಹ್ನ, ರಾಮದೇವ್ ಅವರು ಪತಂಜಲಿಯ ಕೊರೊನಿಲ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ್ದರು. ಇದು ಕೋವಿಡ್ -19 ಗೆ ಚಿಕಿತ್ಸೆ ಎಂದು ಅವರು ಹೇಳಿದ್ದರು. ಪತಂಜಲಿಯ ಈ ಔಷಧಿಯನ್ನು ಸೇವಿಸಿದವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಮತ್ತು ಅವರಲ್ಲಿ ಯಾರೂ ಕೂಡ ಸಾಯಲಿಲ್ಲ ಎಂದು ಅವರು ಹೇಳಿದ್ದರು.

LEAVE A REPLY

Please enter your comment!
Please enter your name here