ಪತಂಜಲಿಯ ಕೊರೋನಿಲ್ ಶೀಘ್ರದಲ್ಲೇ ಜನರಿಗೆ ಲಭ್ಯ : ಬಾಬಾ ರಾಮ್ದೇವ್

0
158
Tap to know MORE!

ಯೋಗ ಗುರು ಬಾಬಾ ರಾಮದೇವ್, ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪತಂಜಲಿಯ ಆಯುರ್ವೇದ ಔಷಧ ಕೊರೊನಿಲ್ ಕುರಿತು ಹೆಚ್ಚಿನ ವಿವರಗಳನ್ನು ನೀಡಿದರು. ಆಯುಷ್ ಸಚಿವಾಲಯವು ಕೊರೋನಿಲ್ ಔಷಧವನ್ನು ‘ಕೋವಿಡ್ ಮ್ಯಾನೇಜ್ಮೆಂಟ್’ ಔಷಧಿ ಎಂದು ಕರೆದ ನಂತರ, ಈಗ ಔಷಧಿಯು ದೇಶಾದ್ಯಂತ ಲಭ್ಯವಾಗಲಿದೆ ಎಂದು ಅವರು ಘೋಷಿಸಿದರು. ಸ್ವಾಮಿ ರಾಮದೇವ್ ಅವರು ಅಲೋಪತಿ ಔಷಧ ಸಂಶೋಧಕರನ್ನು ಸಂಬೋಧಿಸುತ್ತ, ಆಯುರ್ವೇದವು ಔಷಧಿಯ ಸ್ಥಾನಮಾನ ನೀಡಬಹುದಾದ ವಿಜ್ಞಾನವಾಗಿದೆ. ಅದನ್ನು ಯಾರೂ ಅಲ್ಲಗೆಳೆಯುವಂತಿಲ್ಲ ಎಂದು ಹೇಳಿದರು.

ಪತಂಜಲಿಯ ಕೋವಿಡ್-19 ಔಷಧಿಗಳಾದ ಕೊರೊನಿಲ್ ಮತ್ತು ಸ್ವಸಾರಿ ಈಗ ಭಾರತದಾದ್ಯಂತ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ. ಆಯುಷ್ ಸಚಿವಾಲಯದೊಂದಿಗೆ ಇದ್ದ ಎಲ್ಲಾ ವಿವಾದಗಳನ್ನು ಬಗೆಹರಿಸಲಾಗಿದೆ ಮತ್ತು ನಾವು ಇಂದಿನಿಂದ ಭಾರತದಾದ್ಯಂತ ಕೊರೊನಿಲ್ ಮತ್ತು ಸ್ವಸಾರಿಯನ್ನು ಮಾರಾಟ ಮಾಡುತ್ತೇವೆ ಎಂದು ಹೇಳಿದರು.

ಇದು ಯಾವಾಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ?

ಬಲ್ಲ ಮೂಲಗಳ ಪ್ರಕಾರ, ಪತಂಜಲಿ ಸ್ಟೋರ್ ಗಳಲ್ಲದೆ, ‘ಪತಂಜಲಿ ಆರ್ಡರ್ ಮೀ’ ಅಪ್ಲಿಕೇಶನ್ ಮುಂದಿನ ವಾರದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಮತ್ತು ಇದು ಉಚಿತವಾದ ಅಪ್ಲಿಕೇಶನ್ ಆಗಿರಲಿದೆ. ಅಪ್ಲಿಕೇಶನ್‌ಗೆ ಸಂಬಂಧಿಸಿದ ವಿವರಗಳು ಈಗ ಸಂಪೂರ್ಣವಾಗಿ ಲಭ್ಯವಿಲ್ಲದಿದ್ದರೂ, ಆರ್ಡರ್‌ಮೈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಈ ಕೊರೊನಿಲ್ ಔಷಧವು ಆಯುರ್ವೇದ ಸ್ವರೂಪದಲ್ಲಿದೆ ಮತ್ತು ಇದು ಅಶ್ವಗಂಧ, ಗಿಲೋಯ್ ಮತ್ತು ತುಳಸಿಯಂತಹ ವಿಶಿಷ್ಟ ಪದಾರ್ಥಗಳಿಂದ ಕೂಡಿದೆ.
ಇದಲ್ಲದೆ, ಆರ್ಡರ್ ಮೀ ಅಪ್ಲಿಕೇಶನ್ ಕಂಪನಿಯು ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ಉತ್ತೇಜಿಸಲು, ಇತರ ಪತಂಜಲಿ ಉತ್ಪನ್ನಗಳನ್ನು ಸಹ ಮಾರಾಟ ಮಾಡುತ್ತದೆ.

LEAVE A REPLY

Please enter your comment!
Please enter your name here