ಪದವಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭ – ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿಗಳು ಪ್ರಕಟ

0
222
ಪ್ರಾತಿನಿಧಿಕ ಚಿತ್ರ
Tap to know MORE!

ಬೆಂಗಳೂರು : ದ್ವಿತೀಯ ಪಿಯು ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ, 2020-21ರ ಶೈಕ್ಷಣಿಕ ವರ್ಷಕ್ಕೆ, ಪದವಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲು ಉನ್ನತ ಶಿಕ್ಷಣ ಇಲಾಖೆ ಹಸಿರು ನಿಶಾನೆ ತೋರಿಸಿದೆ.

ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕಾಲೇಜು ಶಿಕ್ಷಣ ಇಲಾಖೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರವೇಶ ಪಡೆಯಲು ಬಯಸುವ ಯಾವುದೇ ವಿದ್ಯಾರ್ಥಿಗಳನ್ನು ತಿರಸ್ಕರಿಸಬಾರದು ಎಂದು ಅದು ಹೇಳಿದೆ. ವಿದ್ಯಾರ್ಥಿಗಳು ಇಲ್ಲದ ಕಾರಣ, ಕಳೆದ ವರ್ಷ ತೆಗೆದು ಹಾಕಲಾಗಿದ್ದ ಕೋರ್ಸ್‌ಗಳನ್ನು ಪುನರಾರಂಭಿಸಲು ಎಲ್ಲಾ ಪ್ರಾಂಶುಪಾಲರು ಕ್ರಮ ಕೈಗೊಳ್ಳಬೇಕೆಂದು ಹೇಳಲಾಗಿದೆ.

ಬಿಎ, ಬಿಬಿಎಂ, ಬಿಸಿಎ ಇತ್ಯಾದಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಸಾಮರ್ಥ್ಯವು 15 ಕ್ಕಿಂತ ಕಡಿಮೆಯಿದ್ದರೆ ಯಾವುದೇ ವಿದ್ಯಾರ್ಥಿಗಳನ್ನು ಅದರಲ್ಲಿ ಸೇರಿಸಬಾರದು ಎಂದು ಇಲಾಖೆ ಹೇಳಿದೆ. “15 ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಈ ಕೋರ್ಸ್‌ಗಳಿಗೆ ಪ್ರವೇಶ ಪಡೆದರೆ, ಕಾಲೇಜಿನಲ್ಲಿ ಲಭ್ಯವಿರುವ ಇತರ ಕೋರ್ಸ್‌ಗಳು ಅಥವಾ ಸಂಯೋಜನೆಗಳನ್ನು ಆ ಕಾಲೇಜು ನೀಡಬೇಕು. ಅದಲ್ಲದೆ ಯಾವುದೇ ಹೊಸ ಕೋರ್ಸ್‌ಗಳು ಅಥವಾ ಸಂಯೋಜನೆಗಳನ್ನು ಪ್ರಾರಂಭಿಸಲು ಅವಕಾಶವಿಲ್ಲ. ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ, ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದರೆ, ಅಂತಹ ವಿದ್ಯಾರ್ಥಿಗಳು ಸ್ವಂತವಾಗಿ ಅಧ್ಯಯನ ಮಾಡಬೇಕು. ಐಚ್ಛಿಕ ಕನ್ನಡ ಸೇರಿದಂತೆ ಇತರ ಸಂಯೋಜನೆಗಳಿಗೆ, ಕನಿಷ್ಠ ಐವರು ಪ್ರವೇಶವನ್ನು ಪಡೆದಿರಬೇಕು “ಎಂದು ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

ನಿಯಮಗಳ ಪ್ರಕಾರ, ಉಪನ್ಯಾಸಕರಿಗೆ ಸಮಯ ಸಾರಿಣಿಯನ್ನು ಹಂಚಿಕೊಂಡ ಬಳಿಕ, ಕೇವಲ ನಾಲ್ಕು ಆಥವಾ ಕಡಿಮೆ ಅವಧಿಗಳು ಉಳಿದರೆ, ಅದನ್ನು ಈಗಿರುವ ಉಪನ್ಯಾಸಕರು ನಿರ್ವಹಿಸಬೇಕೇ ಹೊರತು ಇದಕ್ಕಾಗಿ ಹೊರಗಿನಿಂದ ಯಾವುದೇ ಅತಿಥಿ ಉಪನ್ಯಾಸಕರನ್ನು ನೇಮಿಸಬಾರದು. ನೆರೆಹೊರೆಯಲ್ಲಿರುವ ಪಿಯು ಕಾಲೇಜುಗಳನ್ನು ಸಂಪರ್ಕಿಸಿ, ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್ ಗಳು, ಸಂಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ವಿವರಗಳನ್ನು ನೀಡುವ ಮೂಲಕ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳ ಪ್ರವೇಶವನ್ನು ಹೆಚ್ಚಿಸಲು ವೈಯಕ್ತಿಕ ಆಸಕ್ತಿ ವಹಿಸಬೇಕು. ಲಭ್ಯವಿರುವ ಕೋರ್ಸ್‌ಗಳ ವಿವರಗಳು ಮತ್ತು ಶುಲ್ಕವನ್ನು ಕಾಲೇಜು ವೆಬ್‌ಸೈಟ್ ಮತ್ತು ನೋಟಿಸ್ ಬೋರ್ಡ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಇಲಾಖೆ ತಿಳಿಸಿದೆ.

ಸರ್ಕಾರ ಹಲವಾರು ಪರೀಕ್ಷೆಗಳನ್ನು ರದ್ದುಗೊಳಿಸಿದ್ದರಿಂದ, ಸೆಮಿಸ್ಟರ್ ಪರೀಕ್ಷಾ ಶುಲ್ಕದಲ್ಲಿ ಶೇ 50 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ. ಹಲವಾರು ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಮರುಪಾವತಿ ಮಾಡಲು ಕೋರಿದ್ದರು. ಆದರೆ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಅವರು ಪರೀಕ್ಷೆಯನ್ನು ರದ್ದುಗೊಳಿಸಿದಾಗಲೂ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಉಪನ್ಯಾಸಕರು ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಶೇ 50 ರಷ್ಟು ಪರೀಕ್ಷಾ ಶುಲ್ಕವನ್ನು ನಮ್ಮಲ್ಲೇ ಇರಿಸಿ, ಉಳಿದ ಹಣವನ್ನು ಮುಂದಿನ ಸೆಮಿಸ್ಟರ್ ಪರೀಕ್ಷೆಗೆ ರಿಯಾಯತಿಯನ್ನು ವಿಸ್ತರಿಸಲು ಸಂಬಂಧಪಟ್ಟವರಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here