BIG NEWS| ಅಂತಿಮ ವರ್ಷದ ಪದವಿ ಪರೀಕ್ಷೆ ಕಡ್ಡಾಯ | ಆಗಸ್ಟ್ 31 ರೊಳಗೆ ಪರೀಕ್ಷೆ | ಅಕ್ಟೋಬರ್ 1 ರಿಂದ ಹೊಸ ಶೈಕ್ಷಣಿಕ ವರ್ಷ: ಯುಜಿಸಿ

0
384
Tap to know MORE!

ಹೊಸದಿಲ್ಲಿ: ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯವಾಗಿದ್ದು, ಆ. 31ರ ಒಳಗೆ ಮುಗಿಸುವಂತೆ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸೂಚನೆ ನೀಡಿದೆ. ಈ ಸಂಬಂಧ ಅದು ಶನಿವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅ. 1ರಿಂದ ಹೊಸ ಶೈಕ್ಷಣಿಕ ವರ್ಷವನ್ನು ಆರಂಭಿಸುವಂತೆ ಈ ಮಾರ್ಗ ಸೂಚಿಯಲ್ಲಿ ಹೇಳಲಾಗಿದೆ.

ಮೊದಲ ಮತ್ತು 2ನೇ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯವಲ್ಲ. ಇವರಿಗೆ ಪ್ರಸಕ್ತ ವರ್ಷದ ಆಂತರಿಕ ಮೌಲ್ಯಮಾಪನದ ಮೇರೆಗೆ ಶೇ. 50 ಮತ್ತು ಹಿಂದಿನ ವರ್ಷದ ಸೆಮಿಸ್ಟರ್‌ ಸಾಧನೆ ಮೇರೆಗೆ ಉಳಿದ ಶೇ. 50 ಅಂಕ ನೀಡಬೇಕು.

VTU ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಪ್ರಕಟ | ಜುಲೈ 27 ರಿಂದ ಪರೀಕ್ಷೆ

ಅಂತಿಮ ವರ್ಷದ ಪರೀಕ್ಷೆಯನ್ನು ಆಫ್ ಲೈನ್‌/ ಆನ್‌ ಲೈನ್‌ ಮೂಲಕ ಮಾಡಬೇಕು. ಆ. 31ಕ್ಕೆ ಮುನ್ನ ಮುಗಿಸಬೇಕು. ಪರೀಕ್ಷೆ ವೇಳೆ ಕೊರೊನಾ ನಿಯಮ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಮಾರ್ಗಸೂಚಿಯ ಮುಖ್ಯಾಂಶಗಳು:

  1. ಜು. 31ರ ಒಳಗೆ 12ನೇ ತರಗತಿ ಅಥವಾ ದ್ವಿತೀಯ ಪಿಯು ಫ‌ಲಿತಾಂಶ ಪ್ರಕಟಿಸಬೇಕು
  2. ಆಗಸ್ಟ್ 31, 2021 ರೊಳಗೆ ವಿವಿಗಳು ಅಂತಿಮ ವರ್ಷ / ಸೆಮಿಸ್ಟರ್ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕು
  3. ಸೆಪ್ಟೆಂಬರ್ 30ರ ಒಳಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆ ಮುಗಿಸಬೇಕು
  4. ಅಕ್ಟೋಬರ್ 1ರಿಂದ ಅಥವಾ ಅ. 18ರಿಂದ ಹೊಸ ಶೈಕ್ಷಣಿಕ ವರ್ಷ – ಆನ್‌ ಲೈನ್‌ ಅಥವಾ ಆಫ್ ಲೈನ್‌ ತರಗತಿ
  5. ದ್ವಿತೀಯ ಮತ್ತು ತೃತೀಯ ವರ್ಷದ ಸೆಮಿಸ್ಟರ್ ಪರೀಕ್ಷೆ ಕಡ್ಡಾಯವಲ್ಲ;
  6. ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ತರಗತಿ ಆರಂಭಿಸಲು ಸಿದ್ಧತೆ

ಜು. 31ರ ಒಳಗೆ ಪಿಯುಸಿ ಫ‌ಲಿತಾಂಶ ನೀಡಿ!

ಅ. 1ರಿಂದ ಶೈಕ್ಷಣಿಕ ವರ್ಷ ಆರಂಭಿಸುವಂತೆ ಸೂಚನೆ ನೀಡಿರುವ ಯುಜಿಸಿಯು ವಿವಿಧ ಪರೀಕ್ಷಾ ಮಂಡಳಿಗಳು ಜು. 31ರ ಒಳಗೆ 12ನೇ ತರಗತಿ ಫ‌ಲಿತಾಂಶ ನೀಡಬೇಕು ಎಂದಿದೆ. ಫ‌ಲಿತಾಂಶ ತಡವಾದಷ್ಟು ಪದವಿ ಪ್ರವೇಶ ವಿಳಂಬವಾಗುತ್ತದೆ. ಹೀಗಾಗಿ 12ನೇ ತರಗತಿ ಫ‌ಲಿತಾಂಶವನ್ನು ಬೇಗನೆ ನೀಡಬೇಕು. ಜು. 31ರ ಒಳಗೆ ಫ‌ಲಿತಾಂಶ ಬಾರದೆ ಪದವಿ ಪ್ರವೇಶ ವಿಳಂಬಿಸಿದರೆ, ಅ. 18ರಿಂದ ಶೈಕ್ಷಣಿಕ ವರ್ಷ ಆರಂಭಿಸಬಹುದು ಎಂದಿದೆ.

LEAVE A REPLY

Please enter your comment!
Please enter your name here