ಪದವಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ಇಲ್ಲ..!

0
152
Tap to know MORE!

ಬೆಂಗಳೂರು: ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ಗಳಿಗೆ ನಡೆಸುವ ಪ್ರಾಯೋಗಿಕ ಪರೀಕ್ಷೆಯನ್ನು ಕೈ ಬಿಡಲು ಉನ್ನತ ಶಿಕ್ಷಣ ಇಲಾಖೆ ಆಲೋಚಿಸಿದೆ. ಆಂತರಿಕ ಮೌಲ್ಯಾ0ಕನಕ್ಕಾಗಿ ನಡೆಸುವ ಪರೀಕ್ಷೆಯನ್ನು ಕೂಡ ಮಾಡದೇ ಇರಲು ಚಿಂತಿಸಿದೆ.

ಲಾಕ್ಡೌನ್ ನಿಂದಾಗಿ ತರಗತಿಗಳು ನಡೆಯದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸುವುದು ಶಿಕ್ಷಣ ಸಂಸ್ಥೆಗಳಿಗೆ ಕಷ್ಟವಾಗಿದೆ. ಆದರಿಂದ ಹಿಂದಿನ ಪರೀಕ್ಷೆಗಳ ಆಂತರಿಕ ಅಂಕಗಳನ್ನು ಆಧಾರವಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಅಂಕ ನೀಡಲು ಆಲೋಚಿಸಿದೆ.

ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥನಾರಾಯಣ ಗುರುವಾರ ಕರ್ನಾಟಕದ ಎಲ್ಲಾ ಸರಕಾರಿ ಮತ್ತು ಖಾಸಗಿ ವಿವಿ ಕುಲಪತಿಗಳೊಡನೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಆಂತರಿಕ ಮೌಲ್ಯ ಅಂಕ ನೀಡಲು ಪ್ರತ್ಯೇಕ ಪರೀಕ್ಷೆ ಅಗತ್ಯವಿಲ್ಲ ಎಂಬ ಅಭಿಪ್ರಾಯ ತಿಳಿಸಿದರು. ಈ ನಿಟ್ಟಿನಲ್ಲಿ ಎಲ್ಲ ಕುಲಪತಿಗಳು ಶುಕ್ರವಾರದ ಒಳಗೆ ತಮ್ಮ ನಿರ್ಧಾರ ತಿಳಿಸಬೇಕೆಂದು ಸೂಚಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here