ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳು ರದ್ದು : ಸರ್ಕಾರದಿಂದ ಮಹತ್ವದ ಆದೇಶ

0
252
Tap to know MORE!

ಚೆನ್ನೈ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಹೊರತುಪಡಿಸಿ ಉಳಿದೆಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಿಎಂ ಪಳನಿಸ್ವಾಮಿ, ಅಂತಿಮ ಸೆಮಿಸ್ಟರ್ ಹೊರತುಪಡಿಸಿ, ಇತರೆ ಸೆಮಿಸ್ಟರ್ ಗಳ ಪರೀಕ್ಷೆಗೆ ಶುಲ್ಕ ಕಟ್ಟಿದ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಈ ಹಿಂದಿನ ಶೈಕ್ಷಣಿಕ ಪ್ರಗತಿ ಪರಿಗಣಿಸಿ ಅಂಕಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ನೋಡಿ : ರಾಜ್ಯ ಕಾನೂನು ಪರೀಕ್ಷೆ ಮುಂದೂಡಿಕೆ : ಸಚಿವ ಮಾಧುಸ್ವಾಮಿ

ತಮಿಳುನಾಡು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಮುಂದೂಡುವಂತೆ ಕೇಂದ್ರಕ್ಕೆ ಮನವಿ

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ನೀಟ್ – ಜೆಇಇ 2020 ಪರೀಕ್ಷೆಯಿಂದ ನೀಡುವಂತೆ ಒತ್ತಾಯಿಸಿದರು. ಅವರಿಗೆ ಪರಿಸ್ಥಿತಿ ಸರಿಯಾದ ಬಳಿಕ, ಪರೀಕ್ಷೆಗಳನ್ನು ನಡೆಸಲು ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here