ಪರಪ್ಪನ ಅಗ್ರಹಾರದಲ್ಲಿ ಕೊರೊನಾ

0
140
Tap to know MORE!

ಬೆಂಗಳೂರು: ಮಹಾಮಾರಿ ಕೊರೊನಾ ಇತ್ತೀಚೆಗೆ ಪೊಲೀಸರನ್ನು, ವೈದ್ಯರುಗಳನ್ನು ಹೆಚ್ಚಾಗಿ ಭಾದಿಸುತ್ತಿದೆ. ಬೆಂಗಳೂರಿನ ಪಶ್ಚಿಮ ವಲಯದ ಹಲವು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಇದರ ನಡುವೆ ಅನ್ನಪೂರ್ಣೇಶ್ವರಿ ನಗರದ 3 ಕೊಲೆ ಆರೋಪಿಗಳಿಗೆ ಕೊರೊನಾ ದೃಢಪಟ್ಟಿದ್ದು ಸಿಬ್ಬಂದಿಗಳಲ್ಲಿ ಆತಂಕ ಉಂಟು ಮಾಡಿದೆ

ಇದರ ಬೆನ್ನಲ್ಲೇ ಬೆಂಗಳೂರಿನ ಕೇಂದ್ರ ಕಾರಗೃಹದಲ್ಲಿ 20 ಮಂದಿ ಕೈದಿಗಳಿಗೆ ಕೊರೊನಾ ಭಾದಿಸಿದೆ. ಇವರ ಸಂಪರ್ಕದಲ್ಲಿದ್ದ 6 ಸಿಬ್ಬಂದಿಗಳಿಗೂ ದೃಢಪಟ್ಟಿದೆ. ಇದೀಗ ಇತರ ಕೈದಿಗಳಿಗೂ ಸಿಬ್ಬಂದಿಗಳಿಗೂ ಅಪಾಯವನ್ನು ತಂದೊಡ್ಡಿದೆ. ಸೋಂಕಿತರನ್ನು ಕಾರಗೃಹದಿಂದ ಹಜ್ ಭವನಕ್ಕೆ ಶಿಫ್ಟ್ ಮಾಡಲಾಗಿದೆ.

LEAVE A REPLY

Please enter your comment!
Please enter your name here